<p>ಆಳ್ವಾಸ್ ಪ್ರಥಮ ಮೂಡುಬಿದಿರೆ: ಉಡುಪಿಯ ಎಂಜಿಎಂ ಸಂಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಉಜಿರೆಯ ಎಸ್‌ಡಿಎಂ ಕಾಲೇಜನ್ನು ೨೫-೧೭ ಅಂಕಗಳ ಅಂತರದೊಂದಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಆಳ್ವಾಸ್‌ನ ದಿವ್ಯ ಉತ್ತಮ ಆಟಗರ‍್ತಿ ಪ್ರಶಸ್ತಿಯನ್ನು ಪಡೆದರು.</p>