ನ. 1ರಂದು ಸುಳ್ಯಪದವಿನಲ್ಲಿ ಯುವ ಶಕ್ತಿ ಉತ್ಸವ 2024

ಪುತ್ತೂರು

news-details

<p>ಆಮಂತ್ರಣ ಪತ್ರಿಕೆ ಮತ್ತು ಲೋಗೋ ಅನಾವರಣ ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗ (ರಿ )ಸುಳ್ಯಪದವು ಇದರ ವತಿಯಿಂದ ನಡೆಯುವ <br />
 ಯುವಶಕ್ತಿ ಉತ್ಸವ 2024 ಕಾರ್ಯಕ್ರಮ ದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಸುಧೀರ್ ನಾಯಕ್ ಇಂದಾಜೆ ಇವರ ದಿವ್ಯಹಸ್ತದಿಂದ ಆಯುಧಪೂಜಾ ಸುಳ್ಯಪದವು ವೇದಿಕೆಯಲ್ಲಿ ಬಿಡುಗಡೆ ಗೊಳಿಸಿದರು.<br />
 ಯುವಶಕ್ತಿ ಕಾರ್ಯಕ್ರಮ ದ  ಲೋಗೋ ವನ್ನು  ಸುಳ್ಯ ಪದವು ಸರ್ವೋದಯ ಪ್ರೌಢಶಾಲೆಯ  ರಕ್ಷಕ ಶಿಕ್ಷಕರ  ಸಂಘದ ಅಧ್ಯಕ್ಷ  ಪ್ರಕಾಶ್ ಮರದಮೂಲೆಇವರು ಅನಾವರಣ ಗೊಳಿಸಿದರು.<br />
 ಈ ಸಂಧರ್ಭದಲ್ಲಿ, ಆಯುಧ ಪೂಜಾ ಸೇವಾ ಸಮಿತಿ ಯ ಅಧ್ಯಕ್ಷರಾದ ಶ್ರೀ ಸುಂದರ ಕನ್ನಡ್ಕ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಬೆಳಿಯಪ್ಪ ಗೌಡ ಶಬರಿನಗರ, ಜಾಗೃತ ಹಿಂದು ಜಾಗರಣ ದ ಅಧ್ಯಕ್ಷರಾದ ಶ್ರೀ ಅಶೋಕ್ ಪಿ ಎಸ್,ಯುವಶಕ್ತಿ ಕಲಾ ಮತ್ತು ಕ್ರೀಡಾ ಬಳಗದ ಗೌರವಾಧ್ಯಕ್ಷರು ಶ್ರೀ ವಿನಯ ಬೋಳುಗುಡ್ಡೆ, ಅಧ್ಯಕ್ಷರಾದ ಗುರುಕಿರಣ್  ರೈ ಎನ್ ಜಿ ಹಾಗೂ ಪದಾಧಿಕಾರಿಗಳು, ಸದಸ್ಯರು,ಊರ ಪರವೂರ ನಾಗರಿಕರು ಪಾಲ್ಗೊಂಡಿದ್ದರು.</p>

news-details