ಸಮಾಜದ ಶುಭಾಶುಭ ಕಾರ್ಯಕ್ರಮಗಳಿಗೆ ಬೆಳಕು ಚೆಲ್ಲುವ ಅಚ್ಚಳಿಯದೆ ಮರೆಯದ ನೆನಪಾಗಿ ಉಳಿಸುವ ಶ್ರೇಷ್ಠ ಕಾಯಕ ಛಾಯಾಚಿತ್ರ ಗ್ರಾಹಕರದ್ದು ಅವರ ಬದುಕಿನ ಸಂಕಷ್ಟಗಳಿಗೆ ಬಲವಾಗುವಂತೆ ಭಾರತೀಯ ಅಂಚೆ ಇಲಾಖೆಯ ಅಪಘಾತ ವಿಮಾ ಸೌಲಭ್ಯವನ್ನು ವಿಶ್ವ ಅಂಚೆ ದಿನಾಚರಣೆಯಂದು ಸದಸ್ಯರೆಲ್ಲರೂ ಅಪಘಾತ ವಿಮೆಯನ್ನು ಮಾಡುವುದು ಶ್ಲಾಘನೀಯ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀ ಎಮ್ ಸುಧಾಕರ ಮಲ್ಯ ಅವರು ನುಡಿದರು . ಅವರು ವಿಶ್ವ ಅಂಚೆ ದಿನಾಚರಣೆಯಂದು SKPA ಮಂಗಳೂರು ವಲಯದ ವತಿಯಿಂದ ವಿಶ್ವ ಅಂಚೆ ದಿನಾಚರಣೆ ಪ್ರಯುಕ್ತ, ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಇದರ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಮತ್ತು ಅಪಘಾತ ವಿಮೆ ಅಂಚೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಾಸ್ತಾವಿಕ ಮಾತನಾಡಿದರು .

SKPA ದ ಕ - ಉಡುಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ದಯಾನಂದ್ ಬಂಟ್ವಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಶ್ರೀಮತಿ ಅಮಿತಾ ಎಸ್. ರಾವ್ ( ಪೋಸ್ಟ್ ಮಾಸ್ಟರ್ ಪಣಂಬೂರು, ಮಂಗಳೂರು.) ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ SKPA ದ ಕ - ಉಡುಪಿ ಸಂಚಾಲಕರಾದ ಶ್ರೀ ಕರುಣಾಕರ ಕಾನಂಗಿ, ಶ್ರೀ ಪಿ. ದಿನೇಶ್ ಉಪ ಅಂಚೆ ಅಧೀಕ್ಷಕರು ಅಂಚೆ ಇಲಾಖೆ, ಶ್ರೀ ರಮೇಶ್ ಕಲಾಶ್ರೀ ಉಪಾಧ್ಯಕ್ಷರು SKPA ದ ಕ - ಉಡುಪಿ ಜಿಲ್ಲೆ, ಶ್ರೀ ಆನಂದ್ ಎನ್. ಬಂಟ್ವಾಳ್ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರು, ಶ್ರೀ ವಿಠ್ಠಲ ಚೌಟ ಮಾಜಿ ಸಂಚಾಲಕರು, ಶ್ರೀ ಜಗನಾಥ ಶೆಟ್ಟಿ ಮಾಜಿ ಜಿಲ್ಲಾಧ್ಯಕ್ಷರು, ವಲಯಧ್ಯಕ್ಷರಾದ ಶ್ರೀ ಹರೀಶ್ ಅಡ್ಯಾರ್, ಗೌರವಧ್ಯಕ್ಷರಾದ ಶ್ರೀ ಪದ್ಮನಾಭ ಸುವರ್ಣ, ವಲಯದ ಪ್ರದಾನ ಕಾರ್ಯದರ್ಶಿ ಮತ್ತು ಜಿಲ್ಲಾ ಕಟ್ಟಡ ಸಮೀತಿ ಪ್ರದಾನ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್, ಕೋಶಾಧಿಕಾರಿ ಶ್ರೀ ಅರ್ಜುನ್ ಶೃಂಗೇರಿ ಮತ್ತು ವಲಯದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅಂಚೆ ವಿಭಾಗದ ಶ್ರೀ ದಯಾನಂದ್ ಕತ್ತಲ್ ಸಾರ್ ಮತ್ತು ಶ್ರೀ ಸುಭಾಷ್ ಪಿ ಸಾಲ್ಯಾನ್ ರವರು ಅಂಚೆ ಯೋಜನೆಗಳ ಬಗ್ಗೆ ಸಮಗ್ರ ವಿವರವನ್ನು ಸದಸ್ಯರಿಗೆ ನೀಡಿದರು ಸದಸ್ಯರೆಲ್ಲಾ ಅಪಘಾತ ವಿಮೆಯ ಮತ್ತು ಅಂಚೆ ಇಲಾಖೆಯ ಇನ್ನಿತರ ಸವಲತ್ತುಗಳನ್ನು ಪಡೆದರು.