ಶ್ರೀ ನೆಲ್ಲಿತೀರ್ಥ ಗುಹಾಲಯದಲ್ಲಿ ಅ.17ರಂದು ಗುಹಾ ಪ್ರವೇಶ

ಮಂಗಳೂರು

news-details

<p>ಮಂಗಳೂರಿನ ಪ್ರೆಸ್ ಕಬ್ಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಹರಿಕೃಷ್ಣ ಪುನರೂರು, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಶ್ರೀ ಭುವನಾಭಿರಮ ಉಡುಪರು ಗುಹೆ ಹಾಗೂ ಕ್ಷೇತ್ರದ ಪೌರಾಣಿಕ ಮಹತ್ಮೆಯನ್ನು ವಿವರಿಸಿ, ಭಕ್ತರು ಈ ಗುಹಾ ಸ್ನಾನ ಹಾಗೂ ಅದರಿಂದ ಒದಗುವ ಮಾನಸಿಕ, ಬೌದ್ದಿಕ ಹಾಗೂ ಆರೋಗ್ಯದ ಲಾಭವನ್ನು ವಿವರಿಸಿದರು. ನಾಳೆ ನಡೆಯುವ ಗುಹಾಪ್ರವೇಶವನ್ನು ಗಂಟೆ 9.30 ಕ್ಕೆ ಚಿತ್ರಾಪುರ ಮಠದ ಶ್ರೀಗಳಾದ ವಿದ್ಯೇಂದ್ರ ತೀರ್ಥ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ತೀರ್ಥ ಸ್ನಾನವು ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ತೀರ್ಥ ಸ್ನಾನದ ಅವಕಾಶ ಇದೆಯೆಂದು ಕ್ಷೇತ್ರದ ಸಮಿತಿಯ ಸದಸ್ಯರಾದ ಶ್ರೀ ಪ್ರಸನ್ನ ಭಟ್ ತಿಳಿಸಿದರು. ಈ ಸಭೆಯಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಶ್ರೀ ಎನ್.ವೆಂಕಟರಾಜ್ ಭಟ್, ಹಾಗೂ ದೀಪ್ ಕಿರಣ್ ಕರಂಬಾರ್, ಅವರು ಉಪಸ್ಥಿತರಿದ್ದರು, ಶ್ರೀ ಎನ್.ವಿ.ಜಿ.ಕೆ. ಭಟ್ ರವರು ಸ್ವಾಗತಕೋರಿ ಕಡೆಗೆ ವಂದನಾರ್ಪಣೆ ಮಾಡಿದರು.</p>

news-details