<p>ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ನಡೆದ ಜ್ಞಾನ ವಿಜ್ಞಾನ ಮೇಳದಲ್ಲಿ ಹಂಷಿತ 10ನೇ ತರಗತಿ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ, ಪೂರ್ವಿ ಎಸ್ ಗಣಿತ ಮಾದರಿ ಸ್ಪರ್ಧೆಯಲ್ಲಿ ಪ್ರಥಮ, ಕಥಾ ಕಥನ ಸ್ಪರ್ಧೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ಅಭಿನವರಾಜ್ ಎನ್ ಪ್ರಥಮ, ನಿವೇದ ಪಿಎನ್ 5 ನೇ ತರಗತಿ ವಿಜ್ಞಾನ ಮಾದರಿಯಲ್ಲಿ ಪ್ರಥಮ ತನ್ವಿ ಶೆಟ್ಟಿ ಹತ್ತನೇ ತರಗತಿ ವಿಜ್ಞಾನ ಮಾದರಿಯಲ್ಲಿ ದ್ವಿತೀಯ, ಧನ್ವಿ ಬಿ ಶೆಟ್ಟಿ ಹತ್ತನೇ ತರಗತಿ ವಿಜ್ಞಾನ ಮಾದರಿಯಲ್ಲಿ ತೃತೀಯ, ಇಹಾನಿ ಎಸ್ ಶೆಟ್ಟಿ 5ನೇ ತರಗತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ದ್ವಿತೀಯ, ಕಾರ್ತಿಕೇಯ ನಾಲ್ಕನೇ ತರಗತಿ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ತೃತೀಯ, ಅನ್ವಿತ ಎನ್ ಎಸ್ 10ನೇ ತರಗತಿ ವಿಜ್ಞಾನ ಪ್ರಯೋಗದಲ್ಲಿ ದ್ವಿತೀಯ, ಕೃತಿ ಕೆ ಎಸ್ ಎಂಟನೇ ತರಗತಿ ಗಣಿತ ಮಾದರಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದು ಕುಮಾರಿ ಹಂಶಿತಾ, ಪೂರ್ವಿ ಹಾಗೂ ಅಭಿನವರಾಜ್ ಎನ್ ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಶಿಕ್ಷಕರಾದ ಶ್ರೀಮತಿ ಸಂಧ್ಯಾ ಜಿ , ಶ್ರೀಮತಿ ಸಂಧ್ಯಾ ಕುಮಾರಿ, ದಿವ್ಯ ಪ್ರಭು, ಕುಮಾರಿ ಭವ್ಯ ಹಾಗೂ ಚಿತ್ರಕಲಾ ಶಿಕ್ಷಕರಾದ ಶ್ರೀ ರಂಜಿತ್ ತರಬೇತಿಗೊಳಿಸಿರುತ್ತಾರೆ.</p>