ಪ್ರಕೃತಿ ವಿಸ್ಮಯ - ಶ್ರೀ ಕ್ಷೇತ್ರ ನೆಲ್ಲಿತೀರ್ಥ ಗುಹಾಲಯ

ಮಂಗಳೂರು

news-details

ಸೋಜಿಗದ ಗುಹೆ : ದೇವಾಲಯದ ಬಲಕ್ಕೆ ಬ್ರಹತ್ ಮೊಸಳೆಯೊಂದು ಬಾಯ್ದೆರೆದು ಮಲಗಿದಂತ ಪ್ರಥಮ ನೋಟಕ್ಕೆ ಕಾಣುವ, ಮೈ ಮನಗಳಲ್ಲಿ ರೋಮಾಂಚನ ಉಕ್ಕಿಸುವ ಗುಹೆಯು ಪ್ರಾಕೃತಿಕ ವಿಸ್ಮಯ. ಇದರೊಳಗೆಮಹರ್ಷಿ ಜಾಬಾಲಿಯು ತಪಸ್ಸಿಗೆ ಕುಳಿತಿದ್ದ ಜಾಗವನ್ನುನೋಡಬಹುದು. ಗುಹೆಯ ಹೊರಗಿರುವ ದೇಗುಲದ ಮಾಡಿನವರೆಗೂ ತನ್ನ ಬಾಯನ್ನು ಚಾಚಿಕೊಂಡಿರುವ ಈ ಗುಹಾ ದ್ವಾರದಲ್ಲಿ ನೂರಾರು ಜನರು ನಿಲ್ಲುವಷ್ಟು ಸ್ಥಳಾವಕಾಶವಿದೆ.. ಗುಹೆಯೊಳಗೆ ಸುಮಾರು 200 ಮೀಟರುಗಳಷ್ಟು ದೂರ ಕ್ರಮಿಸಿದರೆ ಒಳಗಿರುವ ಪವಿತ್ರವಾದ ಸರೋವರದಲ್ಲಿ ತೀರ್ಥ
ಸ್ನಾನ ಮಾಡಿ ಶಿವಲಿಂಗವನ್ನು ದರ್ಶಿಸಬಹುದು, ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾದ ಈ ಗುಹೆಯ ಒಳಭಾಗದಲ್ಲಿ ಸದಾ ನೆಲ್ಲಿಕಾಯಿ ಆಕಾರದಲ್ಲಿ ನೀರು ತೊಟ್ಟಿಕ್ಕುತ್ತಿರುತ್ತದೆ. ಹಾಗಾಗಿಯೇ ಈ ಗುಹಾ ದೇವಾಲಯಕ್ಕೆ ನೆಲ್ಲಿ ತೀರ್ಥ (ಆಮಲಕ ತೀರ್ಥ) ಎಂದು ಹೆಸರು.
ನೈಸರ್ಗಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಈ ದೇವಾಲಯದಲ್ಲಿ ಭಕ್ತ ಜನರು ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ವೈಭವವನ್ನು ಏಕಕಾಲದಲ್ಲಿ ಆನಂದಿಸಬಹುದು. ಗುಹೆಯ ಒಳಗೆ ಕೂಡ ನೈಸರ್ಗಿಕ ಉದ್ಭವ ಲಿಂಗವಿದ್ದು ತೀರ್ಥ ಸ್ನಾನ ಮಾಡಿ ಭಕ್ತಿಯಿಂದ ಶಿವಲಿಂಗಕ್ಕೆ ಸ್ವಹಸ್ತದಿಂದ ಅಭಿಷೇಕ/ಪೂಜೆಗೈದರೆ ಇಷ್ಟಾರ್ಥ ಸಿದ್ಧಿಸಿ ರೋಗರುಜಿನಗಳು, ಮುಖ್ಯವಾಗಿ ಚರ್ಮವ್ಯಾಧಿಗಳು ಗುಣವಾಗುತ್ತವೆ ಎಂದುಪ್ರತೀತಿ, ಜಾತಿಭೇದವಿಲ್ಲದೆ ಸರ್ವರಿಗೂ ಈ ಗುಹಾಲಯ ಪ್ರವೇಶ ಮುಕ್ತವಾಗಿದೆ.ಗುಹೆಯ ಒಳಗೆ ಹೋಗುವ ದಾರಿಯು ಸ್ವಲ್ಪ ಕಡಿದಾಗಿದ್ದರೂ, ತೀರ್ಥ ಸರೋವರ ಹಾಗೂ ಶಿವಲಿಂಗ ಇರುವ ಜಾಗವು ನೂರಾರು ಜನರು ಒಟ್ಟಿಗೆ ನಿಂತು ಆನಂದಿಸಬಹುದಾದಷ್ಟು ವಿಶಾಲ ಹಾಗು ಎತ್ತರವಿದೆ. ಗುಹೆ ಯು ಇಲ್ಲಿಗೆಕೊನೆಯಾಗುವುದಿಲ್ಲ, ಇನ್ನು ಬಹಳಷ್ಟು ಮುಂದುವರಿಯುತ್ತದೆ. ಆದರೆ, ಸರೋವರದಿಂದಾಚೆಗೆ ಯಾರಿಗೂ ಪ್ರವೇಶವಿಲ್ಲ .

news-details