<p>ಗುಹೆಗೆ ಪ್ರವೇಶಿಸುವ ಮುಂಚೆ ಎಲ್ಲಾ ಭಕ್ತರು ದೇವಸ್ಥಾನದ ಹೊರಭಾಗದಲ್ಲಿರುವ ನಾಗಪ್ಪ ಕೊಳದಲ್ಲಿ ಸ್ನಾನಮಾಡಿಕೊಂಡು ಒದ್ದೆ ಬಟ್ಟೆಯಲ್ಲಿ ಪ್ರವೇಶಿಸಬೇಕು. ಈ ದೇವಾಲಯದ ಮತ್ತೊಂದು ವಿಶೇಷವೇನೆಂದರೆ ವರ್ಷದ ಆರು ತಿಂಗಳು ಮಾತ್ರ ಗುಹಾ ಪ್ರವೇಶಕ್ಕೆ ಆಸ್ಪದವಿದೆ, ಅದೂ ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ ಆಗುವವರೆಗೆ ಮಾತ್ರ.ಗುಹಾ ಪ್ರವೇಶವು ಪ್ರತೀ ವರ್ಷ ತುಲಾಸಂಕ್ರಮಣದಂದು (ಅಕ್ಟೋಬರ್ ತಿಂಗಳ 17 ರಂದು ) ಪ್ರಾರಂಭಗೊಂಡು ಮೇಷ ಸಂಕ್ರಮಣದಂದು (ಏಪ್ರಿಲ್ 14 ) ಕೊನೆಗೊಳ್ಳುತ್ತದೆ. ಆದರೆ ಗುಹೆಯ ಹೊರಗಿರುವ ಮುಖ್ಯ ದೇವಾಲಯದಲ್ಲಿ ಶ್ರೀಸೋಮನಾಥನ ಹಾಗು ಶ್ರೀ ಮಹಾಗಣಪತಿ ದೇವರ ನಿತ್ಯ ಪೂಜೆ, ಆರಾಧನೆ, ಉತ್ಸವಗಳು ಯಾವುದೇ ನಿರ್ಬಂಧವಿಲ್ಲದೆಆಗಮ ಶಾಸ್ತ್ರದ ಪ್ರಕಾರ ದಿನಂಪ್ರತಿ ನಡೆಯುತ್ತದೆ. ಕರ್ನಾಟಕ ಸರ್ಕಾರವು ಇದನ್ನು ಪ್ರಮುಖ ಪ್ರವಾಸಿ ಕೇಂದ್ರವೆಂದು ಗುರುತಿಸಿದೆ, <br />
ಹೆಚ್ಚಿನ ಮಾಹಿತಿ /ವಿವರಗಳಿಗೆ ಸಂಪರ್ಕಿಸಿ: - :0824-2299142 / ಮೊ. 8088708914 / 9986376974</p>