ಪಾಣಾಜೆ ಸುಬೋಧ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಪತಿ ಭಟ್ ಐ ಅವರು ದಿನಾಂಕ 30-04-2025 ರಂದು ವಯೋ ನಿವೃತ್ತಿಗೊಂಡಿರುತ್ತಾರೆ. ಖಾಲಿಯಾದ ಮುಖ್ಯ ಶಿಕ್ಷಕರ ಸ್ಥಾನಕ್ಕೆ ಶಾಲೆಯ ಹಿರಿಯ ಹಿಂದಿ ಭಾಷಾ ಸಹ ಶಿಕ್ಷಕಿ ಶ್ರೀಮತಿ ನಿರ್ಮಲ ಕೆ ಅವರಿಗೆ ಭಡ್ತಿ ನೀಡಿ ನೇಮಿಸಲಾಗಿದೆ.
ಸುಬೋಧ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸುಧೀರ್ಘ 27 ವರ್ಷಗಳ ಅನುಭವವಿರುವ ಶ್ರೀಮತಿ ನಿರ್ಮಲ ಕೆ ಅವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಂಗಳೂರು ಹಾಗೂ ಪುತ್ತೂರಲ್ಲಿ ಪೂರೈಸಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮೇರಿ ಇಮಾಕ್ಯೂಲೇಟ್ ಗರ್ಲ್ಸ್ ಹೈ ಸ್ಕೂಲ್ ಶಿವಮೊಗ್ಗದಲ್ಲಿ ಪೂರೈಸಿದ್ದರು. ಪದವಿಪೂರ್ವ ಶಿಕ್ಷಣವನ್ನು ಕಸ್ತೂರ್ ಬಾ ಮಹಿಳಾ ಪದವಿಪೂರ್ವ ಕಾಲೇಜ್, ಶಿವಮೊಗ್ಗದಲ್ಲಿ ಪಡೆದಿದ್ದರು. ಬಿ ಕಾಂ ಎರಡನೇ ವರ್ಷವನ್ನು ಕಮಲಾ ನೆಹರು ಮಹಿಳಾ ಕಾಲೇಜು ಶಿವಮೊಗ್ಗದಲ್ಲಿ ಪೂರೈಸಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಸ್ನಾತಕ್ ಶಿಕ್ಷಣವನ್ನು ಪಡೆದು ಮೈಸೂರು ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. 1997 ರಲ್ಲಿ ಸುಬೋಧ ಪ್ರೌಢಶಾಲೆಗೆ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇರ್ಪಡೆಗೊಂಡಿದ್ದರು ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿರುತ್ತಾರೆ.