ಸ್ವ ಸಹಾಯ ಸಂಘಗಳ ಮೂಲಕ ಮಹಿಳಾ ಸಶಕ್ತತೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಕರ್ನಾಟಕದ ಮಾನ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ನವೋದಯ ಗ್ರಾಮ ವಿಕಾಸ ಚಾರಿ ಟೆಬಲ್ ಟ್ರಸ್ಟ್ ವತಿಯಿಂದ ಶನಿವಾರ ನಗರದ ಬಂಗ್ರ ಕೂಳೂರುನಲ್ಲಿರುವ ಗೋಲ್ಡ್ ಫಿಂಚ್ ಸಿಟಿಆಯೋಜಿಸಲಾಗಿರುವ 'ನವೋದಯ 'ರಜತ ಸಂಭ್ರಮ' ಸಮಾರಂಭದ ಸಹಕಾರಿ ಲಾಂಛನ ಬಿಡುಗಡೆ ನೆರವೇರಿಸಿ ಮಾತನಾ ಡುತ್ತಿದ್ದರು.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ಥಾಪನೆಯಾದ ನವೋದಯ ಸ್ವ ಸಹಾಯ ಗುಂಪುಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ.ದೇಶದ ಯೋಧರ ಕಲ್ಯಾಣ ನಿಧಿಗೆ ರಾಜೇಂದ್ರ ಕುಮಾರ್ ಅವರು 3ಕೋಟಿ ದೇಣಿಗೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ನವೋದಯ ಸ್ವ ಸಹಾಯ ಸಂಘಗಳ ಮೂಲಕ ಲಕ್ಷಾಂತರ ಗ್ರಾಮೀಣ ಮಹಿಳೆ ಯರ ಬದುಕಿನಲ್ಲಿ ಆರ್ಥಿಕ ಬದಲಾವಣೆ ಮಹಿಳೆಯರ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಹೆಯಾಗಿದೆ ಎಂದರು. ನವೋದಯ ಸ್ವ ಸಹಾಯ ಸಂಘಗಳ ಮೂಲಕ ನವಯುಗದ ಆರಂಭವಾಗಿದೆ. ದೇಶದ ಅಭಿವೃದ್ಧಿ ಯಲ್ಲಿ ಸಹಕಾರಿ ರಂಗ ಮಹತ್ವದ ಕೊಡುಗೆ ನೀಡುತ್ತಿದೆ. ಮಹಿಳೆಯ ರು ಸರಕಾರದ ದೀನ್ ದಯಾಳ್ ಯೋಜನೆ ಸೇರಿದಂತೆ ಸರಕಾರದ ಯೋಜನೆಯ ಪ್ರಯೋಜನ ಪಡೆದು ಆತ್ಮ ನಿರ್ಭರ ಭಾರತಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ರಜತ ಸಂಭ್ರಮ ಸಮಾವೇಶ ವನ್ನು ಕರ್ನಾ ಟಕ ಸರಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಮಾತನಾಡುತ್ತಾ, 25ವರ್ಷಗಳ ಹಿಂದೆ ನಾನು ಉದ್ಘಾಟಿ ಸಿರುವುದು ಸಂತೋಷ ತಂದಿದೆ. ಮಹಿಳಯರಿಗೆ ಆರ್ಥಿಕ ಶಕ್ತಿ ನೀಡಲು ರಾಜೇಂದ್ರ ಕುಮಾರ್ ಮಾಡಿದ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ.ಲಕ್ಷಾಂತರ ಮಹಿಳೆಯರು ಕುಟುಂಬದ ಶಕ್ತಿಯಾಗಿ ದೇಶದ ಅಭಿವೃದ್ಧಿಗಾಗಿ ಸ್ವ ಸಹಾಯ ಸಂಘಗಳ ಮೂಲಕ ಕೊಡುಗೆ ನೀಡುತ್ತಿದ್ದಾರೆ.
ಸಹಕಾರಿ ರಂಗದ ಮೂಲಕ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಡಿ.ಕೆ.ಶಿವಕು ಮಾರ್ ತಿಳಿಸಿದ್ದಾರೆ.ಕರಾವಳಿ ಶಕ್ತಿಯ ಪವಿತ್ರ ತಾಣ.ಕರಾವಳಿ ಜಿಲ್ಲೆಗಳಲ್ಲಿ ಬ್ಯಾಂಕ್ ಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅತೀ ಹೆಚ್ಚು ಬ್ಯಾಂಕ್ ರಾಷ್ಟ್ರಕ್ಕೆ ನೀಡಿದ ಪ್ರದೇಶ.ಇಲ್ಲಿನ ವಿದ್ಯಾವಂತರು ಕರಾವಳಿಯ ಅಭಿವೃದ್ಧಿ ಇಲ್ಲೆ ನಿಂತು ಕೊಡುಗೆ ನೀಡಬೇಕು. ದೇವರೊಂದೆ ನಾಮ ಹಲವು ಎಂಬಂತೆ ನಾವು ಜೊತೆ ಯಾಗಿ ಸಾಗಬೇಕು.ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದಾಗ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಈ ನಿಟ್ಟಿನಲ್ಲಿ ಸ್ವ ಸಹಾಯ ಸಂಘಗಳು ಮಹತ್ವದ ಹೆಜ್ಜೆ ಯಾಗಿದೆ. ಸರಕಾರದ ಗ್ಯಾರಂಟಿ ಯೋಜನೆಗಳು ಸ್ವ ಸಹಾಯ ಸಂಘದ ಸದಸ್ಯರ ಅಭಿವೃದ್ಧಿಗೆ ಸಹಕಾರಿಯಾಗಿದೆ. ಸಹಕಾರಿ ತತ್ವ ದ ಜೊತೆ ಜಿಲ್ಲೆಯ ಅಭಿವೃದ್ಧಿ ಗೆ ಶ್ರಮಿಸಬೇಕಾಗಿದೆ ಎಂದು ರಾಜೇಂದ್ರಕುಮಾರ್ ಅವರ ನೇತೃತ್ವದ ನವೋದಯ ತಂಡವನ್ನು ಅಭಿನಂದಿಸಿ ಶುಭ ಹಾರೈಸಿದರು.
*ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಸಂಸ್ಥಾ ಪಕರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಮಾತನಾ ಡುತ್ತಾ,ದೇಶದ ಗಡಿಯಲ್ಲಿ ವೀರಯೋಧರಿಗೆ ಗೌರವ ಸಲ್ಲಿಸಿ ಯೋಧರ ಕಲ್ಯಾಣ ನಿಧಿಗೆ 3 ಕೋಟಿ ರೂ ದೇಣಿಗೆ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು.25 ವರ್ಷದ ಹಿಂದೆ ಸ್ಥಾಪನೆಯಾದ ಸ್ವ ಸಹಾಯ ಗುಂಪು ಗಳು ಸ್ಥಾಪನೆಯಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಬೆಳೆದಿದೆ.ಮುಂದೆ ಇತರ ಜಿಲ್ಲೆಗೂ ವಿಸ್ತರಿ ಸುವ ಗುರಿ ಇದೆ ಎಂದರು. ಸಮಾನ ತೆಗಾಗಿ ಎಲ್ಲರಿಗೂ ಸಮವಸ್ತ್ರ ವಿತರಿ ಸಲಾಗಿದೆ ಎಂದರು.
*ರಜತ ಸಂಭ್ರಮದ 'ಸಂತೃಪ್ತಿ' ಸ್ಮರಣ ಸಂಚಿಕೆಯ ರಾಜ್ಯ ಸಭಾ ಸದಸ್ಯ,ಧರ್ಮ ಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿ ಮಾತನಾಡುತ್ತಾ,ಸ್ವ ಸಹಾಯ ಸಂಘ ಮಹಿಳೆಯರ ಬೆಳವಣಿಗೆಗೆ ಒಂದು ಅವಕಾಶ ನೀಡಿದಂತಾಗಿದೆ. ಸಂಘಟನೆ ಉದ್ದೇಶ ಅರಿತು ಬೆಳೆ ಯಬೇಕು.ಈ ಸಂಘಟನೆ ಈ ರೀತಿ ಬೆಳೆಯಲು ಕಾರಣರಾದ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದರು.
*ರಜತ ಸಂಭ್ರಮ ಆಚರಣೆಯ ಸಂದರ್ಭ ಸಹಕಾರಿ ಧ್ವಜಾರೋಹಣವನ್ನು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕಯು.ಟಿ. ಖಾದರ್ ಫರೀದ್ ನೆರವೇರಿಸಿ ಮಾತನಾಡುತ್ತಾ,ದ್ವೇಷ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕ್ಕೆ ದೊಡ್ಡ ಕೊಡುಗೆ ನೀಡಬೇಕಾಗಿದೆ. ಕರಾವಳಿಯ ಮಹಿಳೆಯರು ಬೀಡಿ ಉದ್ಯಮ, ಹಂಚಿನ ಕಾರ್ಖಾನೆಯ ಜೊತೆ ಸ್ವ ಸಹಾಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕು ಕಟ್ಟಿದವರು.ಸ್ವ ಸಹಾಯ ಸಂಘಗಳ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದವರು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರು ಹಾಗೂ ನವೋದಯ ಗ್ರಾಮ ವಿಕಾಸ ಟ್ರಸ್ಟ್(ರಿ.) ಮಂಗಳೂರು ಇದರ ಸಂಸ್ಥಾಪಕ ರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
*ಶ್ರೀ ಕ್ಷೇತ್ರ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸ ನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾನ್ಯ ಸಹಕಾರ ಸಚಿವರಾದ ಕೆ. ಎನ್. ರಾಜಣ್ಣ ಮಾತನಾ ಡುತ್ತಾ, ಸಮಾಜದಲ್ಲಿ ಆರ್ಥಿಕ ಚಟುವಟಿಕೆ ನಡೆಯಬೇಕು.ಧ್ವನಿ ಇಲ್ಲದ ಜನರಿಗೆ ದುರ್ಬಲರಿಗೆ ಧ್ವನಿ ನೀಡುವಂತಾ ಗುವಂತಾಗಬೇಕು .ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸಲು ಸಹಕಾರಿ ಆಂದೋಲನ ಜನರ ಆಂದೋಲ ವಾಗಬೇಕು.ಜಾತಿ,ಪಕ್ಷದ ಆಧಾರದಲ್ಲಿ ಸಹಕಾರಿ ರಂಗ ಮುಕ್ತವಾಗಬೇಕುಎಂದರು.
*ಕರ್ನಾಟಕ ಸರಕಾರದ ಕರ್ನಾಟಕ ಸರಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮಾತನಾಡುತ್ತಾ, ದೇಶದ ಶಕ್ತಿ ಯಾಗಿ ಬೆಳೆಯಬೇಕಾಗಿದೆ ಪಕ್ಷಾತೀತ ,ಜಾತ್ಯತೀತವಾಗಿ ಸಮಾಜಿಕ ನ್ಯಾಯ ಉಳಿಸಿ ಸಾಮರಸ್ಯದೊಂದಿಗೆ ವಿಶ್ವದ ಸೂಪರ್ ಪವರ್ ಆಗಬಹುದು ಇಂತಹ ಸ್ವ ಸಹಾಯ ಸಂಘಗಳ ಸ್ಥಾಪಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
* ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡುತ್ತಾ,ರಾಜೇಂದ್ರ ಕುಮಾರ್ ಸಹಕಾರಿ ರಂಗದ ಭೀಷ್ಮ, ಮಹಿಳೆಯರ ಅಭಿವೃದ್ಧಿಯಾದರೆ ಆ ಊರು ಬೆಳೆಯುತ್ತದೆ. ಇಲ್ಲಿನ ಸಹಕಾರಿ ಬ್ಯಾಂಕ್ ಹೆಮ್ಮರವಾಗಿ ಬೆಳೆದಿದೆ.ಮಹಿಳಾ ಆರ್ಥಿಕ ಸಬಲೀಕರಣ ಮಾಡಲು ನವೋದಯ ಸ್ವ ಸಹಾಯ ಸಂಘಗಳ ಮೂಲಕ ಶ್ರಮಿಸುತ್ತಿರುವುದು ಮಾದರಿಯಾಗಿದೆ. ಮಹಿಳೆಯರು ಆರ್ಥಿಕ ಶಕ್ತಿಯಾದಾಗ ಕುಟುಂಬಕ್ಕೆ ಸಮಾಜದ ಅಭಿವೃದ್ಧಿ ಗೆ ಕಾರಣವಾಗುತ್ತದೆ.ಸರಕಾರ ರೂ. 28,000 ಕೋಟಿ ಹಣವನ್ನು ಗೃಹ ಲಕ್ಷ್ಮಿ ಯೋಜನೆಯ ಮೂಲಕ ನೀಡಿ ಸ್ತ್ರೀ ಯರ ಸಶಕ್ತೀಕರಣ ಗುರಿ ಹೊಂದಿದೆ ಎಂದರು
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ ಸೋಜ, ಡಾ.ಮಂಜುನಾಥ ಭಂಡಾರಿ,ಬೋಜೇ ಗೌಡ ,ಶಾಸಕರಾದ ಡಾ.ಭರತ್ ಶೆಟ್ಟಿ,ವೇದ ವ್ಯಾಸ ಕಾಮತ್ ,ಅಶೋಕ್ ಕುಮಾರ್ ರೈ,ಉಮಾನಾಥ ಕೋಟ್ಯಾನ್, ಗುರ್ಮೆ ಸುರೇಶ್ ಶೆಟ್ಟಿ,ಯಶ್ಫಾಲ್ ಸುವರ್ಣ ,ಕಿರಣ್ ಕೊಡ್ಗಿ,ಇಪ್ಕೊ ವ್ಯವಸ್ಥಾ ಪಕ ನಿರ್ದೇಶಕ ಉದಯ ಶಂಕರ್ ಅವಸ್ಥಿ,ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್,ಮಂಗಳೂರು ವಿ.ವಿ.ಯ ಕುಲಪತಿ ಪಿ.ಎಲ್.ಧರ್ಮ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾಎಂ.ಮೋಹನ್ ಆಳ್ವ,ಅತಿಥಿ ಗಳಾದ ಮಿಥುನ್ ರೈ,ಪದ್ಮರಾಜ್, ಇನಾಯತ್ ಅಲಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ,ರಕ್ಷಿತ್ ಶಿವರಾಮ್,ಅಪೆಕ್ಸ್ ಬ್ಯಾಂಕ್ ಆಡಳಿತ ನಿರ್ದೇಶಕ ದೇವರಾಜ್
ಮಾಜಿ ಸಚಿವರಾದ ಬಿ.ರಮಾನಾಥ ರೈ,ವಿನಯ ಕುಮಾರ್ ಸೊರಕೆ,ಅಭಯ ಚಂದ್ರ ಜೈನ್,ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಮೊದಲಾ ದವರು ಉಪಸ್ಥಿತರಿದ್ದರು.
* ನವೋದಯ ರಜತ ಸಂಭ್ರಮ ಸ್ವಾಗತ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು.ಉಪಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು ವಂದಿಸಿದರು.
ನವೋದಯ ರಜತ ಸಂಭ್ರಮ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್.ಎಸ್. ಕೋಟ್ಯಾನ್,ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ,ಎಸ್ ಸಿ ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷವಿನಯ ಕುಮಾರ್ ಸೂರಿಂಜೆ,ಉದ್ಯಮಿ ಜಯವರ್ಮ ಬಲ್ಲಾಳ್ ,ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ,ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್,ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹ ಣಾಧಿಕಾರಿ ಗೋಪಾಲ ಕೃಷ್ಣ ಭಟ್ ಕೆ,ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ನವೋದಯ ಚ್ಯಾರಿಟೇಬಲ್ ಟ್ರಸ್ಟ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ,ನವೋದಯ ಟ್ರಸ್ಟಿಗಳಾದ ಮೇಘರಾಜ್ ಆರ್. ಜೈನ್, ಹೇಮಲತಾ ಹೆಗ್ಡೆ,ಸುನಿಲ್ ಕುಮಾರ್ ಬಜ ಗೋಳಿ, ಮೊದಲಾ ದವರು ಉಪಸ್ಥಿತರಿದ್ದರು. ನಿತೀಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.