ಪಾಕಿಸ್ಥಾನದ ಪಾಪದ ಕೊಡ ತುಂಬಿದೆ.. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು

news-details

ಭಾರತ ಪಾಕಿಸ್ತಾನ ಯುದ್ದ ಕಾರ್ಮೋಡ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪೆಹಲ್ಗಾಮ್ ನಲ್ಲಿ ಉಗ್ರರು ಅಮಾನುಷವಾಗಿ ಭಾರತೀಯರ ಹತ್ಯೆ ಮಾಡಿದ್ದಾರೆ ಅದಕ್ಕೆ ಸಮರ್ಥವಾಗಿ ಉತ್ತರ ಕೊಡೋ‌ ಕೆಲಸ ಪ್ರಧಾನಿ ಮೋದಿ ಹಾಗೂ ಸೈನಿಕರು ಮಾಡಿದ್ದಾರೆ ದೇಶದ ಜನ ಕಾಯ್ತಾ ಇದ್ದ ಉತ್ತರವನ್ನು ಕೊಡೋ ಕೆಲಸ ಆಗಿದೆ. ಪಾಪಿ ಪಾಕಿಸ್ತಾನದ ಪಾಪದ ಕೊಡ ತುಂಬಿದೆ ಎಂದು ಅನಿಸುತ್ತದೆ ಕಳೆದ 25 ವರ್ಷಗಳಿಂದಲೂ ಉಗ್ರರನ್ನ ಸಾಕಿ ನಮ್ಮ ದೇಶದೆ ಮೇಲೆ ಛೂ ಬಿಡೋ ಕೆಲಸ ಪಾಕಿಸ್ತಾನ ಮಾಡಿದೆ, ಇದೀಗ ಅದಕ್ಕೆಲ್ಲ ಸಮರ್ಥ ಉತ್ತರವನ್ನ ಭಾರತ ನೀಡಿದೆ ಉಗ್ರರ ಡೇರೆಗಳನ್ನು ಹುಡುಕಿ‌ ಧ್ವಂಸ ಮಾಡೋ ಕೆಲಸ ಆಗಿದೆ ಇನ್ನಾದ್ರೂ ಪಾಕಿಸ್ತಾನ ಪಾಠ ಕಲಿಯಬೇಕಿತ್ತು. ಅದ್ರೂ ಕಲಿತಿಲ್ಲ ನಮ್ಮ ಸೈನಿಕರು ನಿರಂತರವಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದ್ದಾರೆ ನಮ್ಮ ಸೈನಿಕರು ಉಗ್ರರ ಅಡಗುತಾಣಗಳನ್ನು ಮಾತ್ರ ಧ್ವಂಸ ಮಾಡಿದ್ದಾರೆ. ಯಾವುದೇ ಜನ ಸಾಮಾನ್ಯರಿಗೆ ತೊಂದರೆ ಮಾಡಿಲ್ಲ ಆದ್ರೆ ಪಾಕಿಸ್ತಾನ ತನ್ನ ಬುದ್ದಿ ಬಿಟ್ಟಿಲ್ಲ, ನಮ್ಮ ಜನರ ಮೇಲೆ ದಾಳಿ ಮಾಡೋದನ್ನ ಮುಂದುವರೆಸಿದೆ ಆದ್ರೆ ಅದೆಲ್ಲವನ್ನೂ ನಿಗ್ರಹಿಸುವ‌ ಕೆಲಸವನ್ನು ನಮ್ಮ ಸೇನೆ ಮಾಡಿದೆ ಅಲ್ಲಿಂದ ಬರೋ ಶೆಲ್, ಡ್ರೋನ್ ,ಫೈಟರ್ ಎಲ್ಲವನ್ನ ನಮ್ಮ ಸೇನೆ ಹೊಡೆದುರುಳಿಸಿದೆ ಪಾಕಿಸ್ತಾನಕ್ಕೆ ಪೂರ್ಣ ಪ್ರಮಾಣದ ಬುದ್ದಿ ಕಲಿಸಲು ನಮ್ಮ ಸೈನ್ಯವೂ ರೆಡಿಯಾಗಿದೆ, ಸರ್ಕಾರವೂ ರೆಡಿಯಾಗಿದೆ, ಪ್ರಧಾನಿಮಂತ್ರಿಗಳೂ‌ನಿಶ್ಚಯವನ್ನ ಮಾಡಿದ್ದಾರೆ. ಪಾಕಿಸ್ತಾನ ಉಗ್ರವಾದವನ್ನ ಪೋಷಣೆ‌ ಮಾಡ್ತಾ ಬಂದಿದೆ ಅನ್ನೋದು ಹಿಂದೆಯೇ ಗೊತ್ತಿದೆ ಯಾವಾಗ ಅಮೇರಿಕಾದ ಮೇಲೆ ದಾಳಿ ಮಾಡಿತ್ತೋ‌ ಆಗ ಜಗತ್ತಿಗೇ ಉಗ್ರವಾದ ಗೊತ್ತಾಗಿದೆ. ಆಗ ಜಗತ್ತಿಗೆ ಗೊತ್ತಾಗಿದೆ ಉಗ್ರವಾದ ಕೇವಲ ಭಾರತಕ್ಕೆ ಮಾತ್ರ ಅಲ್ಲ ಅನ್ನೋದು ಉಗ್ರವಾದದ ಪೋಷಕ ಯಾರು ಅಂದ್ರೆ ಅದು ಪಾಕಿಸ್ತಾನ ಆಗಿದೆ. ಹೀಗಾಗಿ ಎಲ್ಲಾ ದೇಶಗಳು ಈಗ ಭಾರತದ ಪರವಾಗಿ ನಿಂತಿದೆ ಎಂದು ಹೇಳಿದರು.

news-details