ಶ್ರೀಮಂಗಳಾದೇವಿ ದೇವಸ್ಥಾನಕ್ಕೆ ಡಿಜಿಟಲ್ ಇ -ಹುಂಡಿ

ಮಂಗಳೂರು

news-details

ಭಕ್ತರು ತಮ್ಮ ಕಾಣಿಕೆಗಳನ್ನು ಡಿಜಿಟಲ್ ವಿಧಾನದ ಮೂಲಕ ಪಾವತಿಸಲು ಅನುಕೂಲವಾಗುವಂತೆ ಮಂಗಳೂರಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಕೆನರಾ ಬ್ಯಾಂಕಿನ ವತಿಯಿಂದ ಡಿಜಿಟಲ್ ಇ -ಹುಂಡಿಯನ್ನು ಸಮರ್ಪಿಸಲಾಯಿತು. ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಕೆ. ಮಜುಂದಾರ್ ಡಿಜಿಟಲ್ ಇ-ಹುಂಡಿಯನ್ನು ಉದ್ಘಾಟಿಸಿದರು.
ಈ ಇ-ಹುಂಡಿಯ ಮೂಲಕ ಪೂಜಾ ನಿಧಿ, ಕಟ್ಟಡ ನಿಧಿ, ಅನ್ನ ಪ್ರಸಾದ ನಿಧಿ ಇತ್ಯಾದಿ ದೇಣಿಗೆಯ ಉದ್ದೇಶವನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಬಹುದು ಮತ್ತು ಅದಕ್ಕೆ ರಶೀದಿಯನ್ನು ತಕ್ಷಣವೇ ಪಡೆಯಬಹುದಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಡಿಜಿಟಲ್ ಇ-ಹುಂಡಿಯ ಸದುಪಯೋಗ ಪಡೆದುಕೊಳ್ಳಬೇಕಾಗಿದೆ, ಈ ಮೂಲಕ ತಮ್ಮ ಕಾಣಿಕೆಯನ್ನು ಪಾವತಿಸುವುದು ಈಗ ತುಂಬಾ ಸುಲಭವಾಗಲಿದೆ ಎಂದು ದೇವಾಲಯದ ಟ್ರಸ್ಟಿಗಳು ಹೇಳಿದರು.
ಕೆನರಾ ಬ್ಯಾಂಕ್ ಡಿಜಿಟಲ್ ಕ್ರಮವನ್ನು ಪ್ರವರ್ತಿಸಲಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಕೆ. ಮಜುಂದಾರ್ ಹೇಳಿದರು ಮತ್ತು ಸ್ಥಾಪಕ ವಲಯಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಟ್ರಸ್ಟಿ ಅರುಣ್ ಜಿ, ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಂಜುನಾಥ್ ಬಿ ಸಿಂಗೈ, ಡಿಜಿಎಂ ಶೈಲೇಂದರ್ ನಾಥ್ ಶೇತ್, ಡಿಜಿಎಂ ಶ್ರೀಮತಿ. ಲತಾ ಕರುಪ್, ಎಜಿಎಂ ತರುಣ್ ಕುಮಾರ್ ಉಪಸ್ಥಿತರಿದ್ದರು.

news-details