ನಗರದ ಕುಳಾಯಿ ಇಸ್ಕಾನ್ ಸಂಸ್ಥೆಗೆ ಅಡುಗೆ ಸಲಕರಣೆಗಳನ್ನು ಒದಗಿಸುವ ಮೂಲಕ ಅನ್ನದಾನಕ್ಕಾಗಿ ಅಡುಗೆಮನೆಯನ್ನು ಸ್ಥಾಪಿಸಲು ಕೆನರಾ ಬ್ಯಾಂಕ್ ತನ್ನ ಸಿಎಸ್ ಆರ್ ನಿಧಿಯ ಮೂಲಕ ರೂ.9,90,500.00 ಆರ್ಥಿಕ ನೆರವು ನೀಡಿದೆ .
ಇಸ್ಕಾನ್ ಮಂಗಳೂರು ಕುಳಾಯಿ ಇದರ ಅಧ್ಯಕ್ಷ ಎಚ್.ಜಿ. ಹೆಸರು ನಿಶ್ತಾ ದಾಸ್ ಅವರಿಗೆ ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಉಪ ಮಹಾ ಪ್ರಬಂಧಕ ಶೈಲೇಂದ್ರನಾಥ ಶೇಟ್ ರವರು ಬ್ಯಾಂಕ್ ನ ಸಿಎಸ್ ಆರ್ ನಿಧಿಯ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಇಸ್ಕಾನ್ ಮಂಗಳೂರು ಕುಳಾಯಿ ಇದರ ಉಪಾಧ್ಯಕ್ಷ ಎಚ್.ಜಿ. ಶ್ರೀವಾಸಾಂಗನ್ ಕೀರ್ತನ್ ದಾಸ್ ,ಕೆನರಾ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ ರಾದಶ್ರೀಮತಿ ಲತಾ ಕುರುಪ್,ವೃತ್ತ ಕಛೇರಿ ಯ ಹಿರಿಯ ವ್ಯವಸ್ಥಾಪಕಿ ಹಿಯಾ ತಿವಾರಿ, ಶಿವಭಾಗ್ ಬ್ಯಾಂಕ್ ಶಾಖಾ ವ್ಯವಸ್ಥಾಪಕಿ ಸುಶೀಲಾ ಉಮೇಶ್ ರಾಜ್, ಶಿವಬಾಗ್ ಶಾಖೆ ಮುಖ್ಯ ವ್ಯವಸ್ಥಾಪಕ ಬಿಕಾಸ್ ಕುಮಾರ್,ಮಂಗಳೂರು ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ದೀಪಂಕರ್ ಶ್ರೀಜ್ಞಾನ,ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ
ಚಂದ್ರಕಾಂತ ಜಂಜೀರಾ ಮೊದಲಾದವರು ಉಪಸ್ಥಿತರಿದ್ದರು