ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ತಾಲೂಕು ಪಂಚಾಯಿತಿ ಬೆಳ್ತಂಗಡಿ ಗ್ರಾಮ ಪಂಚಾಯಿತಿ ಧರ್ಮಸ್ಥಳ ಬೆಂಬಲ ಸಂಸ್ಥೆ ಸಮುದಾಯ ಇವರ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಇದರ ಮಾಹಿತಿ ಸಂವಹನ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಸ್ಥಳದಲ್ಲಿ ಮಂಗಳೂರಿನ ಜರ್ನಿ ಥಿಯೇಟರ್ ತಂಡ ಬೀದಿ ನಾಟಕ ಕಾರ್ಯಕ್ರಮ ದ ಮೂಲಕ ಮಾಹಿತಿಯನ್ನು ನೀಡಿದರು
ಕದ್ರಿ ಬೀದಿ ನಾಟಕವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿನ ಆನಂದ್ ಕೆ. ಜಂಬೆ ಬಾರಿಸುವುದರ ಮೂಲಕ ಉದ್ಘಾಟಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ವಿಮಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ರಾವ್ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್, ಎನ್ ಪಿಡಿಒ ದಿನೇಶ್ ಗೌಡ ಹಾಗೂ ಸಿಬ್ಬಂದಿ ವರ್ಗ ಜಿಲ್ಲಾ ಪಂಚಾಯಿತಿನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕರು, ಮತ್ತು ಜಲಜೀವನ್ ಮಿಷನ್ ವ್ಯವಸ್ಥಾಪಕ ಅಧಿಕಾರಿಗಳು ಉಪಸ್ಥಿತರಿದ್ದರು .