ಯುವ ಬ್ಯಾಟರ್ ಗಳ ಬೊಂಬಾಟ್ ಬ್ಯಾಟಿಂಗ್, ದಾಖಲೆಯ ರನ್ ಗಳಿಸಿದ ಭಾರತ

ಕ್ರೀಡೆ

news-details

ಜೋಹಾನ್ಸ್ ಬರ್ಗ್: ಸಂಜು ಸ್ಯಾಮ್ಸನ್ 109(56)
ತಿಲಕ್ ವರ್ಮ 120(47) ಇಬ್ಬರ ಬೊಂಬಾಟ್ ಬ್ಯಾಟಿಂಗ್ ನಿಂದ 20 ಓವರ್ ನಲ್ಲಿ ದಾಖಲೆ ಯ 283 ರನ್ನು ಗಳಿಸಿದೆ.
ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದರು.ಈ T20 ಸರಣಿ ಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಶತಕ ಬಾರಿಸಿದರೆ, ಮೂರನೇ ಪಂದ್ಯದಲ್ಲಿ ತಿಲಕ್ ವರ್ಮ ಶತಕ ಬಾರಿಸಿದರು. ನಾಲ್ಕನೇ ಪಂದ್ಯದಲ್ಲಿ ಇಬ್ಬರ ನಡುವೆ ದಾಖಲೆ ಯ ಜೊತೆಯೊಂದಿಗೆ ಇಬ್ಬರೂ ಕೂಡ ಅಮೋಘ ಶತಕ ಬಾರಿಸಿದರು.

news-details