ಮಂಗಳೂರಿನಲ್ಲಿ ಐಟಿಹಬ್ ಸ್ಥಾಪನೆಗೆ ಬದ್ದ!

ಮಂಗಳೂರು

news-details

ಐಟಿ ಕಂಪನಿಗಳ ಪ್ರತಿನಿಧಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬೃಜೇಶ್ ಚೌಟ

ಮಂಗಳೂರು: ಮಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಐಟಿ ಕಂಪನಿ ಸ್ಥಾಪಿಸುವ ಸಾಧ್ಯತೆಗಳು ಹೆಚ್ಚಿದ್ದು, ಈಗಾಗಲೆ ಇನ್ಫೋಸಿಸ್, ಟಿಸಿಎಸ್ ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ವಾಗಿ ರೂಪುಗೊಂಡಿರುವ ಐಟಿ ಕಂಪನಿಗಳಿಗೆ ಇಲ್ಲಿ ಅವಕಾಶ ನೀಡುವುದರ ಜತೆಗೆ ಸ್ಥಳೀಯ ಉದ್ಯೋಗವಕಾಶ ಹೆಚ್ಚಳಕ್ಕೂ ಅವಕಾಶ ನೀಡುವಂತಹ ಐಟಿ ಹಬ್ ರೂಪಿಸಲು ನಾವು ಬದ್ದರಾಗಿದ್ದೇವೆ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಹೇಳಿದರು.

ಓಶಿಯನ್‌ಪರ್ಲ್‌ನಲ್ಲಿ ನಡೆದ ಮಂಗಳೂರ್ಸ್ ಐಟಿ ವೇವ್: ಸರ್ಫಿಂಡ್ ಟುವಾರ್ಡ್ಸ್ ದ ಸಿಲಿಕನ್ ಬೀಚ್ ಆ್ ಇಂಡಿಯಾ- ದಿ ಐಟಿ ಮೈಂಡ್ಸ್ ಆ್ ಕುಡ್ಲ’ ಸಂವಾದದಲ್ಲಿ ಮಾತನಾಡಿದರು.

ಮಂಗಳೂರನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಾಣವನ್ನಾಗಿ ಮಾಡಲು ಬೇಕಾದ ಎಲ್ಲ ಮೂಲಸೌಲಭ್ಯ ಕಲ್ಪಿಸಿಕೊಡಲು ಬದ್ಧನಾಗಿದ್ದು, ಈ ನಿಟ್ಟಿನಲ್ಲಿ ಸಚಿವರ ಜತೆ ಚರ್ಚೆ ಸಹಿತ ಹಲವು ಉಪಕ್ರಮ ಈಗಾಗಲೇ ಆರಂಭಿಸಲಾಗಿದೆ. 90ರ ದಶಕದಲ್ಲಿ ಮುಂಬೈಯು ಉದ್ಯೋಗಿಗಳ ಕನಸಿನ ಲೋಕವಾಗಿತ್ತು, ನಂತರ ಈ ಅವಕಾಶವನ್ನು ಬೆಂಗಳೂರು ಪಡೆದುಕೊಂಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುವುದು ಪ್ರತಿಯೊಬ್ಬ ಇಂಜಿನಿಯರ್‌ನ ಕನಸಾಗಿದೆ. ಆದರೆ ಮಂಗಳೂರಿನಲ್ಲಿ ಈ ಸಾಧ್ಯತೆ ಯಾಕಿಲ್ಲ ಎಂಬ ಪ್ರಶ್ನೆ ಬಹಳ ಹಿಂದಿನಿಂದಲೂ ಮೂಡುತ್ತಿದೆ. ಮುಂದೆ ಮಂಗಳೂರಿನಲ್ಲಿ ಐಟಿಹಬ್ ಸ್ಥಾಪನೆಗೆ ಬೇಕಾದ ಸಾಧ್ಯತಾ ಯೋಜನೆಗಳನ್ನು ರೂಪಿಸುವುದರ ಜತೆಗೆ ಉದ್ಯೋಗವಕಾಶ ಹೆಚ್ಚಳಕ್ಕೂ ಗಮನ ನೀಡಲಾಗುವುದು ಎಂದರು.

*ಯಾವುದಕ್ಕೂ ಕೊರತೆ ಇಲ್ಲ

ಮಾಹಿತ ತಂತ್ರಜ್ಞಾನ ಕಂಪನಿಗಳ ಸ್ಥಾಪನೆಗೆ ಪೂರಕ ಎಲ್ಲ ವಾತಾವರಣ ಮಂಗಳೂರಿನಲ್ಲಿದೆ. ದೊಡ್ಡ ಐಟಿ ಕಂಪನಿಗಳನ್ನು ಸೆಳೆಯುವ ಜತೆಗೆ, ಆಂತರಿಕ ಕಂಪನಿಗಳನ್ನು ಬೆಳೆಸಬೇಕಾಗಿದೆ. ತನ್ನ ಚುನಾವಣಾ ಪೂರ್ವದ ನವಯುಗ, ನವಪಥ ಘೋಷಣೆ, ಬ್ಯಾಕ್ ಟು ಊರಿಗೆ, ಬಿಯಾಂಡ್ ಯುವರ್ ಓನ್ ಪರಿಕಲ್ಪನೆಯು ಐಟಿ ಉದ್ಯಮಗಳನ್ನು ಪ್ರೋತ್ಸಾಹಿಸುವ ಭಾಗವಾಗಿದೆ. ಉದ್ಯಮಗಳು ಬಂದಂತೆ ಹೋಟೆಲ್, ಪಬ್‌ಗಳೂ ತೆರೆಯುತ್ತವೆ. ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ ಎಂದರು.

ನಮ್ಮ ಊರನ್ನು ನಾವು ಅತ್ಯುತ್ತಮ ಎಂದು ಹೊರಜಗತ್ತಿಗೆ ತೋರಿಸಬೇಕು. ಇನ್‌ಕ್ಯುಬೇಷನ್ ಸೆಂಟರ್‌ಗಳ ವಿಸ್ತರಣೆಗೆ ಹಣಕಾಸು ಸಚಿವರಿಗೆ ಪತ್ರ ಬರೆಯುತ್ತೇನೆ. ಆ ಮೂಲಕ ಪದವೀಧರ ಯುವಜನತೆ ವೃತ್ತಿ ಕೌಶಲ್ಯ ಕಲಿಕೆಗೆ ಆದ್ಯತೆ ನೀಡಲಾಗುವುದು. ಕೇಂದ್ರ, ರಾಜ್ಯ ಸರಕಾರಗಳೆರಡೂ ಅಭಿವೃದ್ಧಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆ. ಬಿ.ಸಿ,ರೋಡ್- ಅಡ್ಡಹೊಳೆ ಹೆದ್ದಾರಿ ಕಾಮಗಾರಿ 2025ರ ಮಾರ್ಚ್‌ಗೆ ಮುಗಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಶಿರಾಡಿ ಬಳಿಕ ಮಾರ್ನಹಳ್ಳಿ ತನಕ ಹೆದ್ದಾರಿ ಕಾಮಗಾರಿ ಆಗಬೇಕಿದೆ. ಶಿರಾಡಿ ಘಾಟಿಯಲ್ಲಿ ಮಂಗಳೂರು- ಬೆಂಗಳೂರು ರೈಲ್ವೇ, ಬಸ್ ಸಂಪರ್ಕಕ್ಕಾಗಿ ಪ್ರತ್ಯೇಕ ಲೈನ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಮಂಗಳೂರಿನಿಂದ ಮುಂಬಯಿ ಮತ್ತಿರೆಡೆಗೆ ನಿರಂತರ ವಿಮಾನ ಸಂಪರ್ಕ ಹೆಚ್ಚಳ, ಮಂಗಳೂರು ರನ್‌ವೇ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಮಂಗಳೂರು ಐಟಿ ಕಂಪನಿಗಳ ಪ್ರಮುಖರಾದ ಪ್ರವೀಣ್ ಕಲ್ಬಾವಿ ಸಂವಾದ ನಡೆಸಿಕೊಟ್ಟರು. ಮೊಹಮ್ಮದ್ ಹನ್ೀ ಸ್ವಾಗತಿಸಿದರು. ಅಶಿತ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಶಶೀರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಬೋಧ್ ವಂದಿಸಿದರು.

ಮಂಗಳೂರನ್ನು ಟೀಕಿಸುವುದನ್ನು ನಿಲ್ಲಿಸಿ!

ಐಟಿ ಕಂಪನಿಗಳು ಮಂಗಳೂರಿಗೆ ಬರಬೇಕಾದರೆ ಮಂಗಳೂರನ್ನು ಬ್ರಾಂಡಿಂಗ್ ಮಾಡಬೇಕೆ ಹೊರತು ಟೀಕಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಪಬ್ ಇಲ್ಲ, ಹೋಟೇಲ್ ಇಲ್ಲ, ಸೇಫ್ಟಿ-ಸೆಕ್ಯುರಿಟಿ ಇಲ್ಲ ಎಂಬ ಟೀಕೆಯನ್ನು ನಿಲ್ಲಿಸಬೇಕು. ಸರ್ಕಾರದ ಗರಿಷ್ಠ ಸೌಲಭ್ಯಗಳನ್ನು ಪಡೆದು ಕಂಪನಿಗಳನ್ನು ಆಕರ್ಷಿಸಲು ಬೇಕಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಲ್ಲಿ ಐಟಿ ಕಂಪನಿಗಳ ಸ್ಥಾಪನೆ ಹಾಗೂ ಬೆಳವಣಿಗೆ ಕೇವಲ ಸರ್ಕಾರದ ಕೊಡುಗೆ ಮಾತ್ರ ಸಾಕಾಗುವುದಿಲ್ಲ, ಕಂಪನಿಗಳ ಕೊಡುಗೆಯೂ ಅಗತ್ಯ ಎಂದು ಸಂಸದ ಕ್ಯಾ.ಬೃಜೇಶ್ ಚೌಟ ಹೇಳಿದರು.

ಎಂಎನ್‌ಜಿ-1ಅ. ಐಟಿ ಮೀಟಿಂಗ್ 1, 2

ಮಂಗಳೂರಿನಲ್ಲಿ ಐಟಿ ಕಂಪನಿ ಸ್ಥಾಪನೆ ಹಾಗೂ ಉದ್ಯೋಗ ಸೃಷ್ಠಿ ವಿಚಾರವಾಗಿ ನಗರದ ಓಶಿಯನ್‌ಪರ್ಲ್‌ನಲ್ಲಿ ನಡೆದ ಐಟಿ ಕಂಪನಿಗಳ ಪ್ರತಿನಿಧಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬೃಜೇಶ್ ಚೌಟ ಮಾತನಾಡಿದರು.

news-details