ಫೆಂಗಲ್ ಚಂಡಮಾರುತ ಪ್ರಭಾವ : ಇಂದು ಮಳೆ,ನಾಳೆಯಿಂದ ಮೋಡದ ವಾತಾವರಣ ಸಾಧ್ಯತೆ

ಮಂಗಳೂರು

news-details

ಪೂರ್ವ ಕರಾವಳಿಗೆ ಅಪ್ಪಳಿಸಿದ ಚಂಡ ಮಾರುತ ಡಿ. 2 ರ ಸೋಮವಾರ ಸಂಜೆ ಯಿಂದ ಕರಾವಳಿ ಯಲ್ಲಿ ಮಳೆ ಬಿರುಸು ಗೊಳ್ಳುವ ಸಾಧ್ಯತೆ ಇದ್ದು ಡಿ. 3 ಮಂಗಳವಾರ ಮಳೆಯ ಪ್ರಮಾಣ ನಿರೀಕ್ಷೆ ಪ್ರಮಾಣಗಿಂತ ಕಡಿಮೆಯಾಗಲಿದ್ದು ಮೋಡದ ವಾತಾವರಣ ಇರಲಿದೆ.
ಕರಾವಳಿಯಲ್ಲಿ ತುಂತುರು ಮಳೆ ಪ್ರಾರಂಭಗೊಂಡಿದ್ದು ರಾತ್ರಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯ ತೆ ಇದೆ. ಮಂಗಳವಾರ ಚಂಡ ಮಾರುತ ದುರ್ಬಲಗೊಂಡು, ಮಳೆಯ ಪ್ರಮಾಣ ಕಡಿಮೆಯಾಗಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.
ವಾಯು ಭಾರ ಕುಸಿತದ ಗಾಳಿಯ ತಿರುಗುವಿಕೆ ಪಶ್ಚಿಮಕ್ಕೆ ಮುಖ ಮಾಡಿ ಮುಂದುವರಿದಿದ್ದು ಮಂಗಳವಾರ ದಿಂದ ಚಳಿ ಕಡಿಮೆಯಾಗಿ ಮೋಡ ಸೆಖೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

news-details