<p>02 ಅಕ್ಟೊಬರ್ ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಸಿಯೆಷನ್ ಮಂಗಳೂರು ವಲಯದ ವತಿಯಿಂದ ಮಂಗಳೂರಿನ ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ನಲ್ಲಿ ಬಾಪೂಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. <br />
ಮೊದಲಿಗೆ ಬಾಪೂಜಿಯವರ ಪ್ರತಿಮೆಗೆ ಅತಿಥಿಗಳು ಮಾಲಾರ್ಪಣೆಗೈದು ಗೌರವ ಸಲ್ಲಿಸಿದರು. ಸ್ವಚ್ಛತಾ ಆಂದೋಲನದ ಅಂಗವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ಕಳೆದ 25 ವರುಷಗಳಿಂದ ಸ್ವಚ್ಛತಾ ಕಾರ್ಯವನ್ನು ನೆರವೇರಿಸುತ್ತಿರುವ ಶ್ರೀಮತಿ ಕುಸುಮ ಇವರನ್ನು ಗೌರವದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.<br />
ಎಸ್.ಕೆ.ಪಿ. ಎ ಮಂಗಳೂರು ವಲಯ ಅಧ್ಯಕ್ಷ ಹರೀಶ್ ಅಡ್ಯಾರ್, ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು. ಹಾಗೂ ಗಾಂಧಿ ಜಯಂತಿಯ ಶುಭಾಶಯವನ್ನು ತಿಳಿಸಿದರು. <br />
ಎಸ್.ಕೆ.ಪಿ.ಎ ಜಿಲ್ಲಾ ಮಾಜಿ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಜಿಲ್ಲಾ ಮಾಜಿ ಸಂಚಾಲಕರಾದ ನವೀನ್ ಕುದ್ರೋಳಿ, ವಿಠ್ಠಲ್ ಚೌಟ, ಮಂಗಳೂರು ವಲಯ ಗೌರವಾಧ್ಯಕ್ಷ ಪದ್ಮನಾಭ್ ಸುವರ್ಣ, ಉಪಾಧ್ಯಕ್ಷರು ಶ್ರೀ ಪ್ರಭಾಕರ್ ಕುಲಾಲ್,ವಲಯದ ಪ್ರದಾನ ಕಾರ್ಯದರ್ಶಿ ಅಜಯ್ ಕುಮಾರ್, ಕೋಶಾಧಿಕಾರಿ ಅರ್ಜುನ್ ಶೃಂಗೇರಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>