ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು ಮಹಿಳೆಯರ ಒಕ್ಕೂಟದ ಸಹಯೋಗದೊಂದಿಗೆ ಶರೀನ್ ಶಹನ ಅವರೊಂದಿಗೆ ಸಂವಾದವನ್ನು ಏರ್ಪಡಿಸಿತ್ತು. ಒಂದು ಭೀಕರ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಜೀವನ ಪರ್ಯಂತ ಎರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಇವರು, ತಮ್ಮ ಕನಸಾದ ಭಾರತೀಯ ಆಡಳಿತ ಸೇವೆಗೆ ಸೇರ್ಪಡೆಯಾದ ಸಾಹಸಮಯ ಕಥಾ ವೃತ್ತಾಂತವನ್ನು ಆಗಮಿಸಿದ ಎಲ್ಲರೊಂದಿಗೆ ಹಂಚಿಕೊಂಡರು. ಉನ್ನತ ವ್ಯಾಸಂಗದ ನಂತರ, ಕೇಂದ್ರ ಸಾರ್ವಜನಿಕ ಸೇವಾ ಪರೀಕ್ಷೆಗಳನ್ನು ತಮ್ಮ ಶ್ರದ್ಧೆ ಹಾಗೂ ಪರಿಶ್ರಮದಿಂದ. 913 ರಾಂಕ್ ಪಡೆದು ಉತ್ತೀರ್ಣರಾದರು.
ಸಂಜೆಯ ಕಾರ್ಯಕ್ರಮವನ್ನು ಸ್ವಾಗತ ಭಾಷಣದೊಂದಿಗೆ ಐ ಸಿ ಸಿ. ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥರಾದ ಶ್ರೀಮತಿ ನಂದಿನಿ ಅಬ್ಬಾ ಗೋಣಿ ಅವರು ಪ್ರಾರಂಭಿಸಿದರು. ನಂತರ ಐ ಸಿ ಸಿ ಉಪಾಧ್ಯಕ್ಷ ರಾದ ಕರ್ನಾಟಕ ಮೂಲದವರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಕಾರ್ಯಕ್ರಮವನ್ನುದ್ದೇಶಿಸಿ ಸಂದೇಶವನ್ನು ರವಾನಿಸಿದರು. ವಂದನಾರ್ಪಣೆಗಳನ್ನು ಐ ಸಿ ಸಿ ಬಾಹ್ಯ ಚಟುವಟಿಕೆಗಳ ಮುಖ್ಯಸ್ಥರಾದ ಶ್ರೀಮತಿ ಗಾರ್ಗಿ ವೈದ್ಯ ಅವರು ಸಮರ್ಪಿಸಿದ್ದರು. ಶ್ರೀಮತಿ ಮಂಜು ಅವರು ನಿರೂಪಣೆ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶರೀನ್ ಅವರು ತಮ್ಮ ಅಮೋಘ ಜೀವನ ಪಯಣದಲ್ಲಿ ಶಾರೀರಿಕ ಪರಿಮಿತಿಗಳನ್ನು ದಾಟಿ ವ್ಯಾಸಂಗ ಹಾಗೂ ವೃತ್ತಿಪರ ಕನಸುಗಳನ್ನು ಪೂರೈಸುವ ಮಾರ್ಗವನ್ನು ಸೂಚಿಸಿದರು. ಇವರ ಮನಮೋಹಕ. ರೋಚಕ ಭಾಷಣವು. ಆಗಮಿಸಿದ ಸಭಿಕರಿಗೆಲ್ಲ. ಮೈ ರೋಮಾಂಚನಗೊಳಿಸುವುದು ಮಾತ್ರವಲ್ಲದೆ. ಮೈ ಮನ ರೋಮಾಂಚನಗೊಳಿಸುವುದು ಮಾತ್ರವಲ್ಲದೆ, ಜೀವನದಲ್ಲಿ ಸಾಧನೆ ಮಾಡಲು ಸಕಲ ಮಾರ್ಗಗಳು ತೆರೆದಿವೆ ಎನ್ನುವ ಸಂದೇಶವನ್ನು ಸಮರ್ಪಕವಾಗಿ ದೃಢೀಕರಿಸಲಾಯಿತು.
ಎಂತಹ ಕಷ್ಟ ಕಠಿಣ ಕಾರ್ಪಣ್ಯಗಳು ಎದುರಾದರು ನಮ್ಮ ಗುರಿ ತಲುಪಲು ಇವು. ಮೆಟ್ಟಿಲುಗಳು ಮಾತ್ರ ಎಂದು ಶರೀನ್ ಅವರು ಸ್ವತಃ ಉದಾಹರಣೆಯೊಂದಿಗೆ ನಿದರ್ಶನ ನೀಡಿದರು.
ಐಸಿಸಿ ಆಡಳಿತ ಸಮಿತಿಯ ಸದಸ್ಯರು , ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು. ಐ.ಸಿ.ಸಿ ಮಹಿಳಾ ಒಕ್ಕೂಟದ ಸದಸ್ಯರು, ಸಮುದಾಯದ ಹಿರಿಯ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.