ವ್ಯಕ್ತಿತ್ವದ ಬೆಳವಣಿಗೆಗೆ ಶಿಕ್ಷಣ ಶಕ್ತಿಯುತ ಆಯುಧ -ಶಾಜಿ ಯುವಿ

ಕಡಬ

news-details

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಡುಬೆಟ್ಟು ಇಲ್ಲಿ ಶಾಲಾ ವಾರ್ಷಿಕೋತ್ಸವ ಡಿಸೆಂಬರ್ ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಲಾಂ ಬಿಲಾಲ್ ವಹಿಸಿಕೊಂಡಿದ್ದರು.
ಶ್ರೀ ಶಾಜಿ ಯುವಿ ಮಾಲಕರು ಎಲೈಟ್ ರಬ್ಬರ್ ನೆಲ್ಯಾಡಿ ಇವರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ "ಶಿಕ್ಷಣ ಶಕ್ತಿಯುತವಾದ ಆಯುಧವಾಗಿದೆ ಸುಶಿಕ್ಷಿ ತ ಸಮಾಜ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣಗೊಳ್ಳಲು ಸಹಕಾರಿ ಆದುದರಿಂದ ಎಲ್ಲರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಗೆ 37,೦೦೦/- ರೂಪಾಯಿ ಮೌಲ್ಯದ ಒಂದು ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದರು.
ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಲಾಂ ಬಿಲಾಲ್ ಇವರು ಪಡುಬೆಟ್ಟು ವಾರ್ಡಿನ ಸದಸ್ಯರಾದಂತಹ ಶ್ರೀ ರವಿಪ್ರಸಾದ್ ಶೆಟ್ಟಿ ಶ್ರೀಮತಿ ಪುಷ್ಪ ಚೆನ್ನಪ್ಪ ಶ್ರೀಮತಿ ಜಯಲಕ್ಷ್ಮಿ ಪ್ರಸಾದ್ ಶ್ರೀ ಪ್ರಕಾಶ್ ಪೂಜಾರಿ ಇವರ ಸಹಕಾರದಿಂದ 8,000 ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ಹಸ್ತಾಂತರಿಸಿದರು.
ನಿವೃತ್ತ ಎ.ಎಸ್‌.ಐ ಆದಂತಹ ಶ್ರೀ ಸ್ಯಾಮುವೆಲ್ ಎಂ.ಐ. ಹೊಸ ಮಜಲು ಇವರು 16 ಸಾವಿರ ರೂಪಾಯಿ ಮೌಲ್ಯದ ಬ್ಯಾಂಡ್ ಸೆಟ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಶ್ರೀಮತಿ ಲೀಲಾವತಿ ಎಂ. ದೈಹಿಕ ಶಿಕ್ಷಣ ಶಿಕ್ಷಕಿ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಅಂತೆಯೆ ಊರವರಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಆಟೋಟ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಈ ಬಹುಮಾನಗಳ ಪಟ್ಟಿಯನ್ನು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರವಿಚಂದ್ರ ಪಡುಬೆಟ್ಟು ವಾಚಿಸಿದರು.
ಕಾರ್ಯಕ್ರಮದಲ್ಲಿ ಶಾಲೆಗೆ ಧನಸಹಾಯ ಮಾಡಿದ ಮಹಾಪೋಷಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಶಗ್ರಿತ್ತಾಯ, ಕಾರ್ಯದರ್ಶಿ ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ - ಜಾನಕಿ ಅಮ್ಮ ಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನ.
ಶ್ರೀ ಪ್ರವೀಣ್ ಕುಂಟ್ಯಾನ, ನಿರ್ದೇಶಕರು ಒಕ್ಕಲಿಗ ಪತ್ತಿನ ಸಹಕಾರಿ ಸಂಘ ಪುತ್ತೂರು, ಶ್ರೀ ಕುಶಾಲಪ್ಪ ಕೋಟ್ಯಾನ್ ಮಾಲಕರು ಹೋಟೆಲ್ ಗುರು ಕೃಪಾ ನೆಲ್ಯಾಡಿ, ಶ್ರೀ ರಫೀಕ್ ಸೀಗಲ್, ಮಾಲಕರು ಸೀಗಲ್ ಟ್ರೇಡರ್ಸ್, ಶ್ರೀ ಶೀನಪ್ಪ ಬರೆಮೇಲು, ಶ್ರೀ ಜನಾರ್ದನ ಗೌಡ ಕಾನಮನೆ, ಶಾಲಾ ನಾಯಕ ಮಾಸ್ಟರ್ ಸೃಜನ್ ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಅಧ್ಯಕ್ಷರಾದ ಶ್ರೀ ಸುರೇಶ್ ಪಡಿಪಂಡ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಗುರುಗಳಾದ ಶ್ರೀಮತಿ ಜೆಸಿ ಕೆ ಎ ಇವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು. ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಬೀದಿಮಜಲು ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಕಮಲಾಕ್ಷಿ ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಡುಬೆಟ್ಟು, ಕುರುಬರಕೇರಿ, ದೋಂತಿಲ,ತೊಟ್ಟಿಲಗುಂಡೊ ಅಂಗನವಾಡಿಯ ಪುಟಾಣಿಗಳಿಂದ ಕಾರ್ಯಕ್ರಮ ನಡೆಯಿತು. ಬಳಿಕ ಪಡುಬೆಟ್ಟು ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೀರ್ತಿ ಶೇಷ ಶಾಂತಿ ಗೋಡು ಗೋಪಾಲ ಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮ ಪ್ರತಿಷ್ಠಾನದ ವತಿಯಿಂದ ಬಾಲಕಲಾವಿದರಿಂದ ಯಕ್ಷಗಾನ ನಡೆಯಿತು. ಪ್ರತಿಷ್ಟಾ ನದ ಗೌರವಾಧ್ಯಕ್ಷರಾದ ಗುಡ್ಡಪ್ಪ ಬಲ್ಯ, ಅಧ್ಯಕ್ಷರಾದ ಗುರು ಮೂರ್ತಿ ಶಗ್ರಿತ್ತಾಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಗುರುಗಳ ನೆನಪಿನ ಲ್ಲಿ ನಡೆಯುತ್ತಿರುವ ಪ್ರತಿಷ್ಠಾನದ ಕಾರ್ಯ ಯೋಜನೆಗಳ ಪರಿಚಯ ನೀಡಿದರು ಮತ್ತು ಪ್ರತಿಷ್ಠಾನದ ವತಿಯಿಂದ ಯಕ್ಷಗುರು ಯೋಗೀಶ್ ಶರ್ಮ ಅಳದಂಗಡಿಯವರನ್ನು ಸನ್ಮಾನಿಸಲಾಯಿತು. ಊರವರಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಧ್ವಜಾರೋಹಣ
ಪಡುಬೆಟ್ಟು ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ವನ್ನು ಶ್ರೀ ಹಾಜಿ ಹಸನಬ್ಬ ಪ್ರಗತಿಪರ ಕೃಷಿಕರು ಇವರು ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಕವಾಯತು ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳ ಬಹುಮಾನಗಳನ್ನುb ಅಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಬೆಟ್ಟು ಒಕ್ಕೂಟ, ಶ್ರೀಮತಿ ಕಮಲ ಕೆ ಮುಖ್ಯ ಗುರುಗಳು ಸ.ಪ್ರೌ.ಶಾಲೆ ಪಡುಬೆಟ್ಟು, ಶ್ರೀ ಗುಡ್ಡಪ್ಪ ಗೌಡ ಎಸ್ ಡಿ ಎಂ ಸಿ ಅಧ್ಯಕ್ಷರು ಸ.ಪ್ರೌ.ಶಾಲೆ ಪಡುಬೆಟ್ಟು, ಶ್ರೀ ರಫೀಕ್ ಉಳಿತೊಟ್ಟು ಉಪಾಧ್ಯಕ್ಷರು ವಾರ್ಷಿಕೋತ್ಸವ ಸಮಿತಿ, ಶ್ರೀ ಶಿವಪ್ರಸಾದ್ ದುಗ್ಗಲ ಕೋಶಾಧಿಕಾರಿ ವಾರ್ಷಿಕೋತ್ಸವ ಸಮಿತಿ ಇವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಮಮತಾ ಸಿ ಎಚ್ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರು, ವಾರ್ಷಿಕೋತ್ಸವದ ವಿವಿಧ ಸಮಿತಿಗಳ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿವೃಂದ, ಪೋಷಕರು , ವಿದ್ಯಾಭಿಮಾನಿಗಳು ಶಾಲಾ ವಾರ್ಷಿಕೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಿದರು.

news-details