ಎಂ ಆರ್ ಪಿ ಎಲ್ ಗೆ ಪ್ರತಿಷ್ಠಿತ ಮಹಾತ್ಮಾ ಪ್ರಶಸ್ತಿ ಪ್ರದಾನ

ಮಂಗಳೂರು

news-details

<p>ಮಂಗಳೂರು, ಅಕ್ಟೋಬರ್ 4,ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಗೆ ಮಾನವ ಸಂಪನ್ಮೂಲ ಶ್ರೇಷ್ಠತೆ ಮತ್ತು ಸಾಮಾಜಿಕ ಶ್ರೇಷ್ಠತಾ ಕೆಲಸಗಳ ಜವಾಬ್ದಾರಿಗಾಗಿ ಮಾನವ ಸಂಪನ್ಮೂಲ ನಿರ್ವಹಣೆ ಯಲ್ಲಿ ಎಂ ಆರ್ ಪಿ ಎಲ್ ನೀಡಿದ ವಿಶೇಷ ಕೊಡುಗೆಗಾಗಿ 2024 ರ ಮಹಾತ್ಮಾ ಪ್ರಶಸ್ತಿ ಪಡೆದುಕೊಂಡಿದೆ.<br />
ಗಾಂಧೀ ಜಯಂತಿ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 1 ರಂದು ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ನಡೆಯಿತು. ಈ ಪ್ರಶಸ್ತಿ ಯನ್ನು ಭಾರತದ ಮೊದಲ ಮಹಿಳಾ ಐ ಪಿ ಎಸ್ ಅಧಿಕಾರಿ ಮತ್ತು ಮಾಜಿ ಲೆಫ್ಟಿನೆಂಟ್ ಡಾ ಕಿರಣ್ ಬೇಡಿ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ಎಂ ಆರ್ ಪಿ ಎಲ್ ಪರವಾಗಿ ಎಚ್ ಆರ್ ವಿಭಾಗದ ಜಿ ಎಂ ಗಿರೀಶ್ ಕೆ ರಾವ್, ಸಿ ಎಸ್ ಆರ್ ವಿಭಾಗದ ಹಿರಿಯ ವ್ಯವಸ್ಥಾಪಕ ನಾಗರಾಜ ರಾವ್, ಎಚ್ ಆರ್ ವಿಭಾಗದ ಸಹಾಯಕ ನಿರ್ವಾಹಕಿ ಹಿಮಾ ಕುಮಾರಿ ಪ್ರಶಸ್ತಿ ಸ್ವೀಕರಿಸಿದರು. ಮಹಾತ್ಮಾ ಪ್ರಶಸ್ತಿಯ ಸಂಸ್ಥಾಪಕರಾದ ಅಮಿತ್ ಸಚ್ ದೇವ್, ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ, ಲೇಖಕಿ ನಯನ ತಾರಾ ಸಹಗಲ್, ಅನು ಆಗ, ಥಾಮಾರ್ಕ್ಸ್ ಮತ್ತು ಸ್ಥಿನು ಜಿಂದಾಲ್ ಉಪಸ್ಥಿತರಿದ್ದರು. ಎಚ್ ಆರ್ ವಿಭಾಗದ ಜಿಜಿಎಂ ಕೃಷ್ಣ ಹೆಗ್ಗಡೆ ಮಿಯಾರ್ ಅವರು ಮಾನವ ಸಂಪನ್ಮೂಲ ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರಭಾವಕ್ಕಾಗಿ ಮಹಾತ್ಮಾ ಪ್ರಶಸ್ತಿ ಸ್ವೀಕರಿಸಲು ಹೆಮ್ಮೆಯಾಗುತ್ತಿದೆ. ಎಂ ಆರ್ ಪಿ ಎಲ್ ತನ್ನ ಬದ್ಧತೆಯನ್ನು ಸದಾ ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.</p>

news-details