ಸಮುದಾಯದ ಸಾಧಕರಿಗೆ ಸಂಯುಕ್ತ ಕ್ರಿಸ್ಮಸ್ ಸಮ್ಮಿಲನದಲ್ಲಿ ಸನ್ಮಾನ.

ಕಡಬ

news-details

ನೆಲ್ಯಾಡಿಯಲ್ಲಿ ನಡೆದ ಸಂಯುಕ್ತ ಕ್ರಿಸ್ಮಸ್ ಆಚರಣೆ ವಿವಿದ ಕ್ರೈಸ್ತ ಸಮುದಾಯಗಳ ಸ್ನೇಹ ಸಮ್ಮಿಲನಕ್ಕೆ ವೇದಿಕೆ ಯಾಯಿತು.
ಕೊಕ್ಕಡ ನೆಲ್ಯಾಡಿ ಪರಿಸರಗಳ ವಿವಿದ ಕ್ರೈಸ್ತ ಸಮುದಾಯಗಳ ಸುಮಾರು 26ಚರ್ಚ್ ಮತ್ತು ಸಂಸ್ಥೆಗಳ ಸ್ನೇಹ ಮಿಲನದ ವೇದಿಕೆ ಯಾಯಿತು. ಆಕರ್ಷಕ ಶೋಭಾ ಯಾತ್ರೆಯೊಂದಿಗೆ ನೆಲ್ಯಾಡಿ ಬಸ್ ನಿಲ್ದಾಣ ದಿಂದ ಆರಂಭ ವಾದ ವರ್ಣ ರಂಜಿತ ರಾಲಿ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸಂಪನ್ನ ಗೊಂಡಿತು.ಪ್ರಭು ಯೇಸು ಕ್ರಿಸ್ತರ ಬದುಕಿನ ವಿವಿದ ಘಟನೆಗಳನ್ನು ಬಿಂಬಿಸುವ ಸ್ತಬ್ದ ಚಿತ್ರ ಗಳು, ವರ್ಣ ರಂಜಿತ ಪೋಷಾಕು ಗಳು ಸಾಂಟಾ ಕ್ಲೋಸ್ ಚಿತ್ರ ಗಳು ನೋಡುವರ ಕಣ್ ಸೆಳೆಯುವ ದೃಶ್ಯಗಳಾಗಿತ್ತು.

ಸಭಾ ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಸಂಯುಕ್ತ ಕ್ರಿಸ್ಮಸ್ ಆಚರಣಾ ಸಮಿತಿಯ ಅಧ್ಯಕ್ಷರಾದ
ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ವಂದನಿಯ ಫಾ ಷಾಜಿ ಮಾತ್ಯು ಅಧ್ಯಕ್ಷತೆ ವಹಿಸಿದ್ದರು.
ದಿಕ್ಸೂಚಿ ಭಾಷಣವನ್ನು ಮಂಗಳೂರಿನಲ್ಲಿ ಪರಿಗಣಿತ ಅಲೋಷಿಯಸ್ ವಿಶ್ವ ವಿದ್ಯಾಲಯದ ಕುಲಪತಿ ವಂದನಿಯ
ಡಾಕ್ಟರ್ ಪ್ರವೀಣ್ ವಿಜಯ್ ಮಾರ್ಟಿಸ್ ನೀಡಿದರು.
ಆಶೀರ್ವಚನವನ್ನು ಕಾಲಿಕಟ್ ಧರ್ಮ ಪ್ರಾಂತ್ಯ ದ ಪರಮ ಪೂಜ್ಯ ಐರೇನಿಯೋಸ್ ತಿರುಮೇನಿ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ವಿವಿದ ಸ್ಥರಗಳಲ್ಲಿ ವಿಶೇಷ ಸಾಧನೆ ಮಾಡಿದ ಆರು ಮಂದಿಯನ್ನು ಸನ್ಮಾನಿಸಲಾಯಿತು.ನಿವ್ರತ್ತ ಪೊಲೀಸ್ ಅಧಿಕಾರಿ ಶ್ರೀ ಈಪನ್ ವರ್ಗೀಸ್, ಸಿ ಆರ್ ಪಿ ಎಫ್ ಕಂಮಾಂಡೆಂಟ್ ಅನ್ನಮ್ಮ ಯೇಸು ದಾಸ್, ಶೈಕ್ಷಣಿಕ ವಿಭಾಗದಲ್ಲಿ ಜೋನ್ ಜೆಕಬ್, ವೈದಿಕಿಯ ಕ್ಷೇತ್ರದಲ್ಲಿ ಶ್ರೀ ಆಗಸ್ಟಿನ್ ಕೆ ಎಂ ಭೂಸೇನೆಯಿಂದ ಎನ್ ಎ ಮಾತ್ಯು ಸಾಂಟಾ ಕ್ಲೋಸ್ ಪಾತ್ರ ದಾರಿ
ವಿನ್ಸೆಂಟ್ ಕೊಕ್ಕಡ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕನ್ವಿನರ್ ವಂದನಿಯ ಫಾ. ವರ್ಗಿಸ್ ಕೈಪನಡ್ಕ ಕೋಶಾಧಿಕಾರಿ ಜಿನೋಯ್, ಕಾರ್ಯದರ್ಶಿ ಮನೋಜ್ ಬಿಲ್ಡ್ ಟೆಕ್, ಜೊತೆ ಕಾರ್ಯದರ್ಶಿ ಕೆ ಕೆ ಸೇಬಾಷ್ಟಿಯನ್ ಉಪಾಧ್ಯಕ್ಷರಾದ ವಂದನಿಯ ಶಿಭು ಜೋನ್ ಉಪಸ್ಥಿತರಿದ್ದರು.

news-details