ಆಯುಧ ಪೂಜಾಸೇವಾ ಸಮಿತಿ ವತಿಯಿಂದ ಸುಳ್ಯಪದವಿನ ಪೇಟೆಯಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಅಳವಡಿಸಿದ ನೂತನ ಸಿಸಿ ಕ್ಯಾಮರಾದ ಲೋಕಾರ್ಪಣೆ ಕಾರ್ಯಕ್ರಮ ದಿನಾಂಕ 10/01/2025 ಬೆಳಿಗ್ಗೆ 10 ಗಂಟೆಗೆ ಸುಳ್ಯಪದವು ಪೇಟೆಯಲ್ಲಿ ನಡೆಯಲಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷ ಕ ಜಂಬೂರಾಜ್ ಮಹಾಜನ್ ಇವರು ನೂತನ ಸಿಸಿ ಕ್ಯಾಮರಾದ ಲೋಕಾರ್ಪಣೆ ಮಾಡಲಿದ್ದಾರೆ. ಬಡಗನ್ನೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ಪುಷ್ಪಲತಾ ದೇವಕಜೆ, ಪಡುವನ್ನೂರು 2ವಾರ್ಡಿನ ಸದಸ್ಯರಾದ ವೆಂಕಟೇಶ್ ಕನ್ನಡ್ಕ, ಪದ್ಮನಾಭ ಕನ್ನಡ್ಕ, ಶ್ರೀಮತಿ ಕನ್ನಡ್ಕ,ಹಾಗೂ ಆಯುಧಾ ಪೂಜಾ ಸೇವಾ ಸಮಿತಿ ಸುಳ್ಯಪದವು ಇದರ ಗೌರವಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಮತ್ತು ಸಾರ್ವಜನಿಕರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಮ್ಮುಖದಲ್ಲಿ ನೆರವೇರಲಿದೆ.ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ಗಿರೀಶ್ ಕುಮಾರ್ ಕನ್ನಡ್ಕ ತಿಳಿಸಿದ್ದಾರೆ.