ತುಳುನಾಡ್ ಜಾತ್ರೆ ಒಡಿಯೂರು ರಥೋತ್ಸವ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯದಿಂದ ಹಸಿರು ವಾಣಿ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು

news-details

ಶ್ರೀ ಗುರುದೇವ ದತ್ತ ಸಂಸ್ಥಾನಮ್,ಶ್ರೀ ದತ್ತಾಂಜನೇಯ ಕ್ಷೇತ್ರ ದಕ್ಷಿಣ ಗಾಣಗಾಪುರ,ತುಳುನಾಡ ಜಾತ್ರೆ-
ಶ್ರೀ ಒಡಿಯೂರು ರಥೋತ್ಸವ
ಇದರ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಈಶ್ವರಮಂಗಲ ವಲಯ ಇದರ ಆಶ್ರಯದಲ್ಲಿ 11 ಘಟ ಸಮಿತಿಗಳಾದ ಬಂದಡ್ಕ, ಅಡೂರು ,ಕುಂಟಾರು, ಕರ್ನೂರು, ಈಶ್ವರ ಮಂಗಲ, ದೇಲಂಪಾಡಿ, ಕಿನ್ನಿಂಗಾರ್, ಸುಳ್ಯ ಪದವು, ಪಡುಮಲೆ , ಕಾವು, ಎ, ಕಾವು, ಬಿ, ಘಟ ಸಮಿತಿಗಳ ವತಿಯಿಂದ ಹಸಿರು ವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಈಶ್ವರ ಮಂಗಲ ಒಡಿಯೂರು ಬ್ಯಾಂಕ್ ಕಚೇರಿ ಬಳಿಯಲ್ಲಿ ಹಸಿರು ವಾಣಿ ಹೊರೆಕಾಣಿಕೆಗೆ ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ಯ ಗೌರವಾಧ್ಯಕ್ಷ ಮುಂಡ್ಯ ಶ್ರೀಕೃಷ್ಣ ಭಟ್ ಚಾಲನೆ ನೀಡಿದರು.ಈಶ್ವರ ಮಂಗಲ ಗ್ರಾಮ ವಿಕಾಸ ಯೋಜನ ಕಚೇರಿ ಬಳಿಯಿಂದ ಹೊರಟು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸಾನಿಧ್ಯದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಶ್ರೀ ಕ್ಷೇತ್ರ ಒಡಿಯೂರು ಗೆ ಹೊರೆ ಕಾಣಿಕೆಯನ್ನು ಸಮರ್ಪಣೆ ಮಾಡಲಾಯಿತು.
ಈಶ್ವರಮಂಗಲ ಗಜಾನನ ವಿದ್ಯಾ ಸಂಸ್ಥೆಗಳ ಸಂಚಾಲಕ ಶಿವರಾಮ ಪಿ,ಪ್ರಗತಿಪರ ಕೃಷಿಕ ರಾಜೇಂದ್ರ ಪ್ರಸಾದ್ ರೈ ಮೇನಾಲ, ಗ್ರಾಮ ವಿಕಾಸ ಯೋಜನೆ ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತಡ್ಕ,ಸಹಕಾರಿಯ ನಿರ್ದೇಶಕ ಮೋನಪ್ಪ ಪೂಜಾರಿ ಕೆರೆಮಾರು, ಸಹಕಾರಿಯ ವ್ಯವಸ್ಥಾಪಕ ಸುಜಾತ, ಘಟ ಸಮಿತಿ ವಲಯ ಅಧ್ಯಕ್ಷ ಶಿವರಾಮ ಪೂಜಾರಿ ಕೆರೆಮಾರು, ಈಶ್ವರಮಂಗಲ ವಲಯ ಸಂಯೋಜಕಿ ಮಹಿತಾ ರೈ ನಡುಬೈಲು ,ದೇಲಂಪಾಡಿ ಘಟ ಸಮಿತಿಯ ಸೀತಾರಾಮ ರೈ ಕಲ್ಲಡ್ಕ ಗುತ್ತು, ಈಶ್ವರಮಂಗಲ ಘಟಸಮಿತಿ ಅಧ್ಯಕ್ಷ ತಾರಾನಾಥ ನೂಜಿಬೈಲು, ಕಾವು ಘಟಸಮಿತಿ ಅಧ್ಯಕ್ಷ ಅವಿನಾಶ್, ಸೇವಾ ದೀಕ್ಷಿತರಾದ ಬಾಬು, ಮೋಹಿನಿ ,ಭಾಗ್ಯಶ್ರೀ , ಸಂಘದ ಸದಸ್ಯರಾದ ಚಂದ್ರಶೇಖರ ಮುಂಡ್ಯ, ಜಯಲಕ್ಷ್ಮಿ ಅಂಬಟೆಮೂಲೆ, ಚಾಲಕ ಪ್ರಶಾಂತ್ ಅಡೂರು ಉಪಸ್ಥಿತರಿದ್ದರು.

news-details