ನೆಲ್ಯಾಡಿ ಪ್ರಾ. ಕೃ. ಪ. ಸ. ಸಂ.ದ ಶಿರಾಡಿ ಶಾಖೆಯಲ್ಲಿ ಕಲ್ಪವೃಕ್ಷ ಸಹಕಾರಿ ಸೌಧ ಲೋಕಾರ್ಪಣೆ.

ಮಂಗಳೂರು

news-details

ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಹಲವು ಸಾಧನೆಗಳ ಮೂಲಕ ಈ ಭಾಗದ ಜನರಿಗೆ ಕೀರ್ತಿಯನ್ನು ತಂದಿದೆ. ಶೇ. 100 ಸಾಲ ಮರುಪಾವತಿ ಮಾಡುವ ಮೂಲಕ ಇಲ್ಲಿಯ ಜನರು ಸಂಘದ ಬೆಂಬಲಕ್ಕೆ ನಿಂತಿದ್ದಾರೆ. 30 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ ಏಳು ಕಂದಾಯ ಗ್ರಾಮಗಳನ್ನು ಆವರಿಸಿದ ಸಂಘ ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಎನ್ನುವಂತದ್ದು ಹೆಗ್ಗಳಿಕೆಯ ವಿಷಯವಾಗಿದೆ. ಕಳೆದ 39 ವರ್ಷಗಳಿಂದ ಈ ಸಂಘದ ಸಾರಥ್ಯವನ್ನು ಹೊಂದಿಸಿರುವಂತಹ ಉಮೇಶ್ ಶೆಟ್ಟಿ ಪಟ್ಟೆಯವರ ಕಾರ್ಯ ಅಭಿನಂದನೀಯ ಎಂದು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು ಇದರ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ನುಡಿದರು.
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.)ದ ಶಿರಾಡಿ ಶಾಖೆಯ ನೂತನ ಕಟ್ಟಡ ಕಲ್ಪತರು ಸಹಕಾರಿ ಸೌಧ ಹಾಗೂ ಶಾಖಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ನಿರ್ದೇಶಕ ಜಯರಾಮ .ರೈ. ಎಸ್.ಬಿ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ನ್ಯಾಯ ಬೆಲೆ ಅಂಗಡಿಯನ್ನು ಮಂಗಳೂರು ಸಹಕಾರ ಸಂಘಗಳ ಉಪ ನಿಬಂಧಕರು ರಮೇಶ್ ಹೆಚ್.ಎನ್. ಉದ್ಘಾಟಿಸಿದರು.
ಕ್ಯಾಂಪ್ಲೋ ಖರೀದಿ ಕೇಂದ್ರವನ್ನು ಮಂಗಳೂರು ಕ್ಯಾಂಪ್ಕೋ ಲಿ. ನ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ, ಉದ್ಘಾಟಿಸಿದರು.

ರಸಗೊಬ್ಬರ ಗೋದಾಮು ಉದ್ಘಾಟನೆಯನ್ನು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್. ಎಂ. ಉಪಸ್ಥಿತರಿದ್ದರು.
ಸಭಾ ಅಧ್ಯಕ್ಷತೆಯನ್ನು ನೆಲ್ಯಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ, ಯಸ್ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತೂರು ಕ್ಯಾಂಪ್ಕೋ ಲಿ. ನ ಉಪಾಧ್ಯಕ್ಷ ಶಂಕರನಾರಾಯಣ ಭಟ್, ಸಹಕಾರ ಸೌಧಕ್ಕೆ ಜಾಗ ನೀಡಿ ಸಹಕರಿಸಿದ ಅಶೋಕ್, ಕ್ಯಾಂಪ್ಕೋ ಲಿ. ನ ನಿರ್ದೇಶಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ. ಎಂ,
ನಿರ್ದೇಶಕರುಗಳಾದ ಜಯಾನಂದ ಪಿ, ಬಾಲಕೃಷ್ಣ ಬಿ, ಸರ್ವೋತ್ತಮ ಗೌಡ, ಪ್ರಶಾಂತ ರೈ, ಸುದರ್ಶನ್, ವಸಂತ ಯಸ್, ಹಣಕಾಸು ಪೂರೈಕೆ ಸಂಸ್ಥೆಯ ಪ್ರತಿನಿಧಿ ಶ್ರೀಮತಿ ಉಷಾ ಅಂಚನ್, ಶ್ರೀಮತಿ ಸುಲೋಚನಾ ಡಿ, ಅಣ್ಣು ಬಿ, ಶ್ರೀಮತಿ ಸುಮಿತ್ರಾ, ಗುರುರಾಜ ಭಟ್ ಮತ್ತು ಸರ್ವಸದಸ್ಯರು, ಹಾಗೂ ಸಹಕಾರಿ ಸಂಘದ ಸಿಬ್ಬಂದಿಗಳಾದ ಸಿಬ್ಬಂದಿ ವರ್ಗ ರತ್ನಾಕರ ಪಿ, ರಮೇಶ್ ನಾಯ್ಕ, ಮಹೇಶ್ ಎಮ್ ಟಿ, ಅನೀಷ್ ಕೆ ಜೆ, ಅಶೋಕ್, ಸಂದೀಪ್ ಕುಮಾರ್, ಮುಕುಂದ ಪ್ರಸಾದ್ ಎಸ್, ರೋಶನ್ ಕುಮಾರ್ ಬಿ ಜೆ, ವಿಶ್ವನಾಥ ಕೆ, ಧನುಷ್ ಜೆ, ಪ್ರಜ್ಞಾ ಬಿ, ವನಿತ ಡಿ, ನಾಗೇಶ್ ಪಿ, ತಾರನಾಥ, ಪ್ರಮೋದ್ ಎಮ್, ವಸಂತ ಕೆ, ರಘುನಾಥ ಕೆ (ಪಿಗ್ನಿ ಸಂಗ್ರಾಹಕ) ಸಹಕರಿಸಿದರು.
ಲಹರಿ ಸಂಗೀತ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲ್ ವಂದಿಸಿದರು. ನಿವೃತ್ತ ಶಿಕ್ಷಕ ರವೀಂದ್ರ ಟಿ ಕಾರ್ಯಕ್ರಮ ನಿರೂಪಿಸಿದರು.

ಕಳೆದ 39 ವರ್ಷಗಳಿಂದ ಸಂಘವನ್ನು ಮುನ್ನಡೆಸಿಕೊಂಡು ಬಂದಿರುವ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆಯವರನ್ನು ಸನ್ಮಾನಿಸಿದರು. ಈ ಸಂದರ್ಭ ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಜಯರಾಮ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಸ್ಟರ್ ಪ್ಲಾನರಿಯ ಪ್ರಭಾಕರ ಭಟ್, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಕಟ್ಟಡಕ್ಕೆ ಜಾಗ ನೀಡಿದ ಅಶೋಕ್, ರಘು ಎಸ್ ಎಂ, ಸಂಘದ ಹಿರಿಯ ಸದಸ್ಯ ಜೋಸೆಫ್ ಕೆ. ಕೆ ಯವರನ್ನು ಸನ್ಮಾನಿಸಲಾಯಿತು.

news-details