ಈಶ್ವರಮಂಗಲ ಜಾತ್ರೆ : ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ವೇದಿಕೆಯಲ್ಲಿ ಅಂಗನವಾಡಿ ಮಕ್ಕಳ ಕಲರವ

ಪುತ್ತೂರು

news-details

ಭಕ್ತ ಜನರ ಮನಸ್ಸುನ್ನು ಮುದಗೊಳಿಸುವ ಕಲಾವಿದರನ್ನು, ಮಕ್ಕಳನ್ನು ಪ್ರೋತ್ಸಾಹಿಸಿ :ನಿವೃತ್ತ ಉಪ ತಹಸೀಲ್ದಾರ್ ರಾಮಣ್ಣ ನಾಯ್ಕ್
ಈಶ್ವರಮಂಗಲ ಜಾತ್ರೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಉಪ ತಹಸೀಲ್ದಾರ್ ರಾಮಣ್ಣ ನಾಯ್ಕ್ ರವರು ಮಾತನಾಡಿ ಭಕ್ತ ಜನರ ಮನಸ್ಸುನ್ನು ಮುದಗೊಳಿಸುವ ಕಲಾವಿದರನ್ನು, ಮಕ್ಕಳನ್ನು ಪ್ರೋತ್ಸಾಹಿಸುವ ಅಗತ್ಯ ಇದೆ.ಅವರ ಕಲಾ ಚಟುವಟಿಕೆ ಎಲ್ಲೆಡೆ ಪಸರಿಸಲಿ ಎಂದು ಶುಭ ಹಾರೈಸಿದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮಟ್ಟಿ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಜಾತ್ರೋತ್ಸವ ಸಮಿತಿ ಪ್ರಧಾನ ಕಾರ್ಯ ದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಆನಂದ ರೈ ಸಾಂತ್ಯ,ಸಂಚಾಲಕರಾದ
ಸತೀಶ್, ಕೊರಗಪ್ಪ ಮುಂಡ್ಯ ಉಪಸ್ಥಿತರಿದ್ದರು. ಶಿಕ್ಷಕ
ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರ್ವಹಿಸಿದರು.
ಅಂಗನವಾಡಿ ಕೇಂದ್ರದ ಪುಟಾಣಿಗಳು ವಿವಿಧ ಪದ್ಯ ಗಳಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸೇರಿದ ಸಭೀಕರನ್ನು ಮುದ ಗೊಳಿಸಿದರು.

news-details