ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಅಕ್ಟೋಬರ್ 23ರಿಂದ 27ರವರೆಗೆ ಸರಸ್ವತಿ

ವಿದ್ಯಾಪೀಠ ವಸತಿ ಶಾಲೆ ಸತ್ನಾ ,ಮಧ್ಯ ಪ್ರದೇಶ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ

ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಪ್ರಥಮ ಪಿಯುಸಿ

ವಿದ್ಯಾರ್ಥಿಗಳಾದ ಸಾತ್ವಿಕ್ ಆರ್‌, ಚವನ್‌ ಕುಮಾರ್‌, ಸಚಿತ್ ಪಿ.ಕೆ, ಸಮೃಧ್ಧಿ ಜೆ. ಶೆಟ್ಟಿ, ರಿಧಿ ಸಿ ಶೆಟ್ಟಿ,

ಎಂ ಪವಿತ್ರಾ ಇವರು ಭಾಗವಹಿಸಲಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,

ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಶುಭಹಾರೈಸಿರುತ್ತಾರೆ.

ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್‌, ಡಾ. ಜ್ಯೋತಿ ಮತ್ತು ಯತೀಶ್‌

ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.