ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ -- ಉಡುಪಿ ಜಿಲ್ಲೆ : ಉಭಯ ಜಿಲ್ಲೆಯ ಛಾಯಾಗ್ರಾಹಕರಿಗಾಗಿ ಒಂದು ದಿನದ ವಿಡಿಯೋ ಕಾರ್ಯಾಗಾರ

ಮಂಗಳೂರು

news-details

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ -- ಉಡುಪಿ ಜಿಲ್ಲೆ ಇದರ ಮಂಗಳೂರು ವಲಯದ ವತಿಯಿಂದ ಉಭಯ ಜಿಲ್ಲೆಯ ಛಾಯಾಗ್ರಾಹಕರಿಗಾಗಿ ಒಂದು ದಿನದ ವಿಡಿಯೋ ಕಾರ್ಯಾಗಾರವನ್ನು ಸಹೋದಯ ಹಾಲ್ ಬಲ್ಮಠ ಮಂಗಳೂರಿನಲ್ಲಿ ನಡೆಸಲಾಯಿತು.

ಈ ಕಾರ್ಯಾಗಾರವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಬಂಟ್ಟಾಳ್ ಉದ್ಘಾಟಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಿಲ್ಲಾ ಮಾಜಿ ಸಂಚಾಲಕರಾದ ಶ್ರೀ ವಿಠಲ ಚೌಟ , ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ರಮೇಶ್ ಕಲಾಶ್ರೀ, ಜಿಲ್ಲಾ ಛಾಯಾ ಕಾರ್ಯದರ್ಶಿ ಶ್ರೀ ರವಿ ಮಾನಸ, ಜಿಲ್ಲಾ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ್ ಬಂಟ್ವಾಳ, ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಅಜಯ್ ಮಂಗಳೂರು, ಗೌರವಾಧ್ಯಕ್ಷರಾದ ಶ್ರೀ ಪದ್ಮನಾಭ ಸುವರ್ಣ, ಛಾಯಾ ಕಾರ್ಯದರ್ಶಿ ವಿಶಾಲ್ ವಾಮಂಜೂರ್, ಕ್ರೀಡಾ ಕಾರ್ಯದರ್ಶಿ ಶ್ರೀ ಮುರಳಿ ಕುಮಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯವರಾದ ಶ್ರೀ ಸುಮಂತ್ ಸುವರ್ಣರವರನ್ನು ಅಭಿನಂದಿಸಿ ಗೌರವಿಸಲಾಯಿತು.

ಪ್ರಾರ್ಥನೆಯನ್ನು ಶ್ರೀ ನವೀನ್ ಕೋಡಿಕಲ್ ರವರು ನೆರವೇರಿಸಿ, ಅತಿಥಿಗಳನ್ನು ಮಂಗಳೂರು ವಲಯದ ಅಧ್ಯಕ್ಷರಾದ ಶ್ರೀ ಹರೀಶ್ ಅಡ್ಯಾರ್ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಲಯದ ಕೋಶಾಧಿಕಾರಿಯವರಾದ ಶ್ರೀ ಅರ್ಜುನ್ ಶೃಂಗೇರಿಯವರು ನಿರ್ವಹಿಸಿದರು.

news-details